ಮಹಾರಾಷ್ಟ್ರ: ಭಾರೀ ಮಳೆ, ಓರ್ವ ಸಾವು

Update: 2019-06-09 15:41 GMT

ನಾಸಿಕ್, ಜೂ. 9: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರುಗಾಳಿ ಹಾಗೂ ಮುಂಗಾರು ಪೂರ್ವ ಮಳೆ ಸುರಿದಿದೆ. ಮಳೆ ಸಂಬಂಧಿ ಘಟನೆಗಳಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿರುಗಾಳಿ ಬೀಸಿದ ಪರಿಣಾಮ ನಾಸಿಕ್ ನಗರದ ಕೆಲವು ಸ್ಥಳಗಳಲ್ಲಿ ಮರಗಳು ಬುಡಮೇಲಾಗಿವೆ. ವಿವಿಧ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ 5 ಗಂಟೆಗಳ ಕಾಲ ಅಡೆತಡೆ ಉಂಟಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿರುಗಾಳಿಯಿಂದೊಡಗೂಡಿದ ಮಳೆಯಿಂದ ಇಲ್ಲಿನ ವಾಡಾಲಾದಲ್ಲಿ ಶನಿವಾರ ಮನೆಯ ಛಾವಣಿ ಕುಸಿದು 70 ವರ್ಷದ ಮಹಿಳೆ ಮೃತಪಟ್ಟರು. ಅಲ್ಲದೆ, ಮೂವರು ಗಾಯಗೊಂಡಿದ್ದಾರೆ ಎಂದು ಇಂದಿರಾನಗರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯಿಯೋಲಾ ಪಟ್ಣಣದಲ್ಲಿ ಕೂಡ ಮುಂಗಾರು ಪೂರ್ವ ಭಾರೀ ಮಳೆ ಸುರಿದಿದೆ. ಇದರಿಂದ ಕೆಲವು ಮನೆಗಳಿಗೆ ಹಾನಿ ಉಂಟಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News