ಭಟ್ಕಳ: ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಗೆ ಸದಸ್ಯತ್ವ ಅಭಿಯಾನ

Update: 2019-06-09 15:54 GMT

ಭಟ್ಕಳ: ಅರಣ್ಯವಾಸಿಗಳಿಗೆ ಅರಣ್ಯಭೂಮಿ ಮಂಜೂರಿ ಸಂಬಂಧಿಸಿ ಕಾನೂನಾತ್ಮಕ ನೆರವು ಮತ್ತು ಮಾರ್ಗಧರ್ಶನ ನೀಡುವ ದಿಶೆಯಲ್ಲಿ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಗೆ ಅರಣ್ಯ ಅತಿಕ್ರಮಣದಾರರ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗಿದೆಯೆಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ತಿಳಿಸಿದರು.

ಅವರು ಇಂದು ತಾಲೂಕಾ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿ ಮಾತನಾಡುತ್ತಿದ್ದರು. ಅನಕ್ಷರಸ್ಥ,ಕಾನೂನು ಅಜ್ಞಾನದಿಂದ ಅರಣ್ಯ ಅತಿಕ್ರಮಣದಾರರಿಗೆ ಕಾನೂನಾತ್ಮಕ ಪೂರ್ಣಪ್ರಮಾಣದ ಬೆಂಬಲವನ್ನು ವ್ಯಕ್ತಪಡಿಸುವದಲ್ಲದೇ, ಕಾಲಕಾಲಕ್ಕೆ ಮಂಜೂರಿಗೆ ಸರ್ಕಾರ ನಿರ್ದೆಶಿಸಿದ ಮಾಹಿತಿ ಮತ್ತು ಮಾರ್ಗದರ್ಶನವನ್ನುವೇದಿಕೆ ಸದಸ್ಯರಿಗೆ ಕಾಲಕಾಲಕ್ಕೆ ನೀಡುವದು. ಸದಸ್ಯತ್ವ ಮೂಲ ಉದ್ದೇಶವಾಗಿದೆಯೆಂದು ಅವರು ವಿವರಿಸಿದರು.

ಜಿಲ್ಲೆಯ ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರರಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ಅರಣ್ಯಭೂಮಿ ಹಕ್ಕನ್ನು ಒದಗಿಸಲು ಶ್ರಮಿಸಲಾಗುತ್ತದೆ. ಭಟ್ಕಳ ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ 8819ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಕೇವಲ 217 ಅರ್ಜಿಗಳಿಗೆ ಮಾತ್ರ ಹಕ್ಕುಪತ್ರ ದೊರೆಕಿದ್ದು, ತಾಲೂಕಾದ್ಯಂತ 6961ಅರ್ಜಿಗಳು ತಿರಸ್ಕಾರವಾಗಿದ್ದು, ಅರಣ್ಯವಾಸಿಗಳ ಪರವಾದ ನಿಲುವನ್ನು ತೆಗೆದುಕೊಂಡಾಗ ಮಾತ್ರ ತಿರಸ್ಕೃತಗೊಂಡ ಅತಿಕ್ರಮಣದಾರರಿಗೆ ನ್ಯಾಯ ಸಿಗುವ ಸಾದ್ಯತೆ ಇದೆಯೆಂದು ರವಿ ನಾಯ್ಕರು ತಿಳಿಸಿದರು.

ಸದಸ್ಯತ್ವ ಅಭಿಯಾನವು ಜಿಲ್ಲಾದ್ಯಂತ ಜರುಗಿಸಿ, ಮಂಜೂರಿಗೆ ಸಂಬಂಧಪಟ್ಟಂತೆ ಪುನರಪರಿಶೀಲನೆಯ ಕಾರ್ಯದಲ್ಲಿ ಆಡಳಿತ ವ್ಯವಸ್ಥೆಗೆ ಹೋರಾಟ ವೇದಿಕೆಯು ಸಂಪೂರ್ಣ ಸಹಕಾರ ನೀಡಲು ವೇದಿಕೆ ಬದ್ದವಾಗಿದೆಯೆಂದು ರವೀಂದ್ರ ನಾಯ್ಕ ಸಭೆಯಲ್ಲಿ ತಿಳಿಸಿದರು.

ಸದಸ್ಯತ್ವಕ್ಕೆ ಶುಲ್ಕವಿಲ್ಲ ಅರಣ್ಯವಾಸಿಗಳ ಹಿತಕಾಪಾಡುವ ದಿಶೆಯಲ್ಲಿ ಹಮ್ಮಿಕೊಂಡ ಸದಸ್ಯತ್ವಕ್ಕೆ ಅರಣ್ಯ ಅತಿಕ್ರಮಣದಾರರು ಯಾವದೇ ಶುಲ್ಕ ಭರಿಸುವ ಅವಶ್ಯಕತೆಯಿಲ್ಲ. ಅರಣ್ಯ ಅತಿಕ್ರಮಣದಾರರ ಹಿತಾಸಕ್ತಿಯಿಂದ ಹಮ್ಮಿಕೊಂಡ ಸದಸ್ಯತ್ಬ ಅಭಿಯಾನಕ್ಕೆ ಎಲ್ಲ ಅತಿಕ್ರಮಣದಾರರು ಸಕ್ರಿಯವಾಗಿ ಭಾಗವಹಿಸಬೇಕೆಂದು ಭಟ್ಕಳ ತಾ.ಅಧ್ಯಕ್ಷ ರಾಮಾ ಮೊಗೇರ ಈ ಸಂಧರ್ಭದಲ್ಲಿ ತಿಳಿಸಿದರು.

ಸಭೆಯ ಉದ್ದೇಶಿಸಿ ಪದಾಧಿಕಾರಿಗಳಾದ ರಿಜ್ವಾನ್, ಖಯ್ಯುಮಂ ಸಾಬ,ಸುಲೇಮಾನ ಕೆ ಮುಂತಾದವರು ಮಾತನಾಡಿದರು. ಜಿಲ್ಲಾ ಸಂಚಾಲಕ ದೇವರಾಜ ಗೊಂಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News