ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ ರಚನೆ: ಸಚಿವ ಯು.ಟಿ.ಖಾದರ್

Update: 2019-06-10 05:20 GMT

ಮಂಗಳೂರು, ಜೂ.10: ರಾಜ್ಯದಲ್ಲಿ  ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ ರಚಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ವತಂತ್ರ ವಾಗಿ ನಿರ್ವಹಿಸಲು ಈ ಪ್ರಾಧಿಕಾರವನ್ನು ರಚಿಸಲಾಗುವುದು. ರಾಜ್ಯದ ಮುನಿಸಿಪಲ್ ಕಾಯಿದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತಂದು ಈ ಪ್ರಾಧಿಕಾರ ರಚಿಸಲಾಗುವುದು ಎಂದು ಅವರು ವಿವರಿಸಿದರು.

ಒಟ್ಟು ಎಂಟು ಮಂದಿ ಸದಸ್ಯರನ್ನು ಒಳಗೊಂಡ ಈ ಪ್ರಾಧಿಕಾರದಲ್ಲಿ 5 ಮಂದಿ ಕೈಗಾರಿಕಾ ಪ್ರದೇಶದ ಸದಸ್ಯರು, ಓರ್ವ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯ, ಸ್ಥಳೀಯಾಡಳಿತ ಸಂಸ್ಥೆ ಗೆ ಸೇರಿದ ಒಬ್ಬ ಸದಸ್ಯ ಸರಕಾರದಿಂದ ನೇಮಕ ಗೊಳ್ಳುತ್ತಾರೆ. ಒಬ್ಬ ನಗರಾಭಿವೃದ್ಧಿ ಇಲಾಖೆಯ ಸದಸ್ಯ ಈ ಸಮಿತಿಯಲ್ಲಿ ರುತ್ತಾರೆ. ಈ ಪ್ರಾಧಿಕಾರ ಸಂಗ್ರಹಿಸುವ ತೆರಿಗೆಯಲ್ಲಿ  ಶೆ.30 ಸ್ಥಳೀಯಾಡಳಿತಕ್ಕೆ ನೀಡಬೇಕಾಗಿದ್ದು, ಶೇ.70 ತೆರಿಗೆಯನ್ನು ಪ್ರಾಧಿಕಾರ ಉಪಯೋಗಿಸುವ ಅಧಿಕಾರ ಹೊಂದಿರುತ್ತದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News