×
Ad

ಮೋದಿ, ಶಾ, ಆದಿತ್ಯನಾಥ್ ನಮಗೆ ಸುಪ್ರೀಂ ಕೋರ್ಟ್ ಎಂದ ಶಿವಸೇನೆ ನಾಯಕ ರಾವತ್

Update: 2019-06-10 16:58 IST

ಲಕ್ನೋ, ಜೂ.10: ಈ ವರ್ಷದ ಅಂತ್ಯದಲ್ಲಿ ರಾಮ ಮಂದಿರ ನಿರ್ಮಾಣ ಆರಂಭವಾಗಲಿದ್ದು, ತನಗೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಆದಿತ್ಯನಾಥ್ ಅವರು ಸುಪ್ರೀಂ ಕೋರ್ಟ್ ನಂತೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

“ಬಹುಮತದಿಂದ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. 125 ಕೋಟಿ ಜನರ ಧ್ವನಿ ವಿಷಯವಾಗುವುದಿಲ್ಲವೇ?, ಸುಪ್ರೀಂ ಕೋರ್ಟ್ ಅದರ ಕೆಲಸವನ್ನು ಮುಂದುವರಿಸುತ್ತದೆ. ಆದರೆ ನಮಗೆ ಮುಂದುವರಿಯಲು ಹಲವು ದಾರಿಗಳಿವೆ. ನಮಗೆ ಸುಪ್ರೀಂ ಕೋರ್ಟ್ ಯಾವುದು?, ನಮಗೆ, ಸುಪ್ರೀಂ ಕೋರ್ಟ್ ಎಂದರೆ ನರೇಂದ್ರ ಮೋದಿಜಿ, ಅಮಿತ್ ಶಾ ಜಿ, ಯೋಗಿ ಜಿ ಮತ್ತು ಜನರು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News