ಮೆಕ್ಸಿಕೋದ ಗ್ವಾಡಾಲಜಾರ ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾರತಕ್ಕೆ ಅತಿಥಿ ರಾಷ್ಟ್ರದ ಗೌರವ

Update: 2019-06-10 15:19 GMT

ಹೊಸದಿಲ್ಲಿ,ಜೂ.10: ಮೆಕ್ಸಿಕೋದಲ್ಲಿ ನ.30ರಿಂದ ಡಿ.8ರವರೆಗೆ ನಡೆಯಲಿರುವ 33ನೇ ಗ್ವಾಡಾಲಜಾರ ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾರತವನ್ನು ಅತಿಥಿ ರಾಷ್ಟ್ರ ಎಂದು ನಿಯೋಜಿಸಲಾಗಿದೆ ಎಂದು ನ್ಯಾಷನಲ್ ಬುಕ್ ಟ್ರಸ್ಟ್(ಎನ್‌ಬಿಟಿ) ಸೋಮವಾರ ಪ್ರಕಟಿಸಿದೆ. ಇದು ಸ್ಪಾನಿಷ್ ಭಾಷಿಕ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪುಸ್ತಕ ಮೇಳವಾಗಿದೆ ಎಂದು ಅದು ತಿಳಿಸಿದೆ.

ಮೇಳದಲ್ಲಿ ಭಾರತದ ಮಳಿಗೆಯು 35ಕ್ಕೂ ಅಧಿಕ ಲೇಖಕರು ಮತ್ತು ಕಲಾವಿದರ ಕೃತಿಗಳನ್ನು ಮತ್ತು 15 ಪ್ರಕಾಶನ ಸಂಸ್ಥೆಗಳ ಪ್ರಕಟನೆೆಗಳನ್ನು ಪ್ರದರ್ಶಿಸಲಿದೆ. ಮಹಾಭಾರತ ಮತ್ತು ರಾಮಾಯಣ ಸೇರಿದಂತೆ ಪ್ರಾಚೀನ ಮತ್ತು ಅಪರೂಪದ ಹಸ್ತಪ್ರತಿಗಳು,ಚಿತ್ರ ಪುಸ್ತಿಕೆಗಳು,ಕರಕುಶಲ ವಸ್ತುಗಳು ಮತ್ತು ವರ್ಣ ಕಲಾಕೃತಿಗಳನ್ನೂ ಪ್ರದರ್ಶಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ನೋಡಲ್ ಏಜೆನ್ಸಿಯಾಗಿರುವ ಎನ್‌ಬಿಟಿ ಹೇಳಿಕೆಯಲ್ಲಿ ತಿಳಿಸಿದೆ.

 ಪುಸ್ತಕ ಮೇಳಕ್ಕೆ ಸಮಾನಾಂತರವಾಗಿ ನಡೆಯುವ ಇನ್ನೊಂದು ಪ್ರದರ್ಶನವು 40 ಖ್ಯಾತ ಭಾರತೀಯ ಕಲಾವಿದೆಯರ ರಚನೆಗಳನ್ನೊಳಗೊಂಡಿರುತ್ತದೆ. ‘ಫೆೆಸ್ಟಿವಲ್ ಆಫ್ ಇಂಡಿಯಾ’ಎಂಬ ಇನ್ನೊಂದು ಕಾರ್ಯಕ್ರಮದಲ್ಲಿ ಜಾನಪದ,ಶಾಸ್ತ್ರೀಯ ಮತ್ತು ಸಮಕಾಲೀನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುವುದು.

ಭಾರತೀಯ ಚಲನಚಿತ್ರೋತ್ಸವವನ್ನೂ ಆಯೋಜಿಲಾಗಿದ್ದು,ದಂಗಲ್,ಓಂಕಾರ ಮತ್ತು ಚೆನ್ನೈ ಎಕ್ಸ್‌ಪ್ರೆಸ್‌ನಂತಹ ಚಿತ್ರಗಳು ಪ್ರದರ್ಶಿತಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News