ಜಮ್ಮು ಕಾಶ್ಮೀರ: ಎನ್‌ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತ

Update: 2019-06-11 15:30 GMT

ಶ್ರೀನಗರ, ಜೂ. 11: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಅನ್ಸಾರ್ ಘಝ್ವತ್‌ಉಲ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದಾರೆ.

ಶೋಪಿಯಾನ ಜಿಲ್ಲೆಯ ಝೈನಪೋರಾದ ಅವ್ನಿರಾ ಗ್ರಾಮದ ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಹತ ಉಗ್ರರ ಮೃತದೇಹ ಪತ್ತೆಯಾಗಿದೆ. ಹತ ಉಗ್ರರನ್ನು ಶೋಪಿಯಾನದ ಶಕೀರ್ ಅಹ್ಮದ್ ಹಾಗೂ ಕುಲ್ಗಾಂವ್ ಜಿಲ್ಲೆಯ ಸಯಾರ್ ಭಟ್ ಎಂದು ಗುರುತಿಸಲಾಗಿದೆ. ಇಬ್ಬರೂ ಅನ್ಸಾರ್ ಘಝ್ವತ್‌ಉಲ್ ಹಿಂದ್ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ಸಾರ್ ಘಝ್ವತ್‌ಉಲ್ ಹಿಂದ್ ಸಂಘಟನೆಯ ಮುಖ್ಯಸ್ಥ ಝಾಕಿರ್ ಮೂಸಾ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನಲ್ಲಿ ಈ ವರ್ಷ ಮೇ 24ರಂದು ಭದ್ರತಾ ಪಡೆ ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಬುರ್ಹಾನ್ ವಾನಿ ಹತನಾದ ಬಳಿಕ ಮೂಸ ಆತನ ಉತ್ತರಾಧಿಕಾರಿಯಾಗಿದ್ದ. ಅನಂತ್‌ನಾಗ್ ಜಿಲ್ಲೆಯ ಕೊಂಕೆರ್‌ನಾಗ್ ಪ್ರದೇಶದಲ್ಲಿ 2016 ಜುಲೈ 8ರಂದು ನಡೆದ ಗುಂಡಿನ ಚಕಮಕಿಯಲ್ಲಿ ಬುರ್ಹಾನ್ ವಾನಿ ಹತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News