ನಿರ್ಮಲಾ ಸೀತಾರಾಮನ್, ಜೈಶಂಕರ್‌ಗೆ ಜೆಎನ್‌ಯುನಲ್ಲಿ ಗೌರವ

Update: 2019-06-12 16:33 GMT

ಹೊಸದಿಲ್ಲಿ, ಜೂ. 12: ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವವಿದ್ಯಾನಿಲಯದ ಮೂರನೆ ಘಟಿಕೋತ್ಸವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ‘ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿ’ ನೀಡಿ ಗೌರವಿಸಲು ಜೆಎನ್‌ಯು ಕಾರ್ಯಕಾರಿ ಮಂಡಳಿ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಎ, ಎಂಫಿಲ್ ಡಿಗ್ರಿಯನ್ನು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಸೋಷಿಯಲ್ ಸಯನ್ಸ್ ಹಾಗೂ ಸ್ಕೂಲ್ ಆಫ್ ಇಂಟರ್‌ನ್ಯಾಶಲನ್ ಸ್ಟಡೀಸ್‌ನಲ್ಲಿ ಪಡೆದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಕೂಡ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ.

ಎಂಫಿಲ್ ಹಾಗೂ ಪಿಎಚ್‌ಡಿಯನ್ನು ಕೂಡ ಅವರು ಇಲ್ಲೇ ಪಡೆದಿದ್ದಾರೆ. ಅವರ ವಿಶೇಷ ವೃತ್ತಿಜೀವನ ಹಾಗೂ ಸಾಧನೆ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆ. ಜೆಎನ್‌ಯು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಇವರು ಸ್ಫೂರ್ತಿಯ ಶ್ರೇಷ್ಠ ಮೂಲ ಎಂದು ವಿಶ್ವವಿದ್ಯಾನಿಲಯವ ಪತ್ರಿಕಾ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News