ಚತ್ತೀಸ್‌ಗಡ: ಸರಕಾರಿ ನೌಕರರಿಗೆ ಕಚೇರಿಯಲ್ಲಿ ಜೀನ್ಸ್, ಟೀಶರ್ಟ್ ನಿಷೇಧ

Update: 2019-06-12 17:51 GMT

 ರಾಯ್‌ಪುರ,ಜೂ.12: ಚತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯ ಜಿಲ್ಲಾಧಿಕಾರಿಯವರು, ಸರಕಾರಿ ನೌಕರರು ಟಿಶರ್ಟ್, ಜೀನ್ಸ್ ಹಾಗೂ ಪ್ರಚೋದನಕಾರಿ ಬಣ್ಣದ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಉದ್ಯೋಗಿಗಳು ಸಾದಾ ಉಡುಪುಗಳನ್ನು ಹಾಗೂ ಸೂಚಿತವಾದ ಸಮವಸ್ತ್ರಗಳನ್ನು ಧರಿಸಿಕೊಂಡು ಕಚೇರಿಗೆ ಬರಬೇಕೆಂದು ಜಿಲ್ಲಾಧಿಕಾರಿ ಕೆ.ಡಿ.ಕುಂಜನ್ ಮಂಗಳವಾರ ಕಳುಹಿಸಿರುವ ಸುತ್ತೋಲೆಯೊಂದರಲ್ಲಿ ತಿಳಿಸಿದ್ದಾರೆ.

ಉದ್ಯೋಗಿಗಳು ಕಚೇರಿಯಲ್ಲಿ ಟಿಶರ್ಟ್, ಜೀನ್ಸ್ ಹಾಗೂ ಪ್ರಚೋದನಕಾರಿ ಬಣ್ಣಗಳ ಉಡುಪುಗಳನ್ನು ಧರಿಸಿ ಕಚೇರಿಗಳಿಗೆ ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಸರಕಾರಿ ನಿಯಮಗಳ ಪ್ರಕಾರ ಸಿಬ್ಬಂದಿಯು ಸರಳವಾದ ಉಡುಪುಗಳನ್ನು ಧರಿಸಬೇಕಾಗಿದೆಯೆಂದು ಕುಂಜನ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಈ ಆದೇಶದ ಪ್ರಕಾರ ಇನ್ನು ಮುಂದೆ ನಾಲ್ಕನೆ ದರ್ಜೆಯ ಕೆಲವು ಉದ್ಯೋಗಿಗಳಿಗೆ ಕಡ್ಡಾಯವಾಗಿ ಸಮವಸ್ತ್ರ ಧರಿಸುವುದರಿದ ರಿಯಾಯಿತಿ ನೀಡಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಉದ್ಯೋಗಿಗಳು ಸಾದಾ ಹಾಗೂ ಸರಳವಾದ ಉಡುಪುಗಳನ್ನು ಧರಿಸಬೇಕಾಗುತ್ತದೆ ಮತ್ತು ಕೆಲವರನ್ನು ಹೊರತುಪಡಿಸಿ ನಾಲ್ಕನೆ ದರ್ಜೆಯ ಉದ್ಯೋಗಿಗಳು ಸಮವಸ್ತ್ರ ಧರಿಸಿಕೊಂಡು ಬರಬೇಕಾಗಿದೆ. ವಸ್ತ್ರಸಂಹಿತೆಯನ್ನು ಉಲ್ಲಂಘಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕುಂಜಮ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News