ಪ.ಬಂಗಾಳ ಗುಜರಾತ್ ಆಗಿಬಿಟ್ಟಿದೆ, ನಾಳೆ ಅಯೋಧ್ಯೆಯಾಗಬಹುದು: ಶಿವಸೇನೆ

Update: 2019-06-13 16:31 GMT

ಹೊಸದಿಲ್ಲಿ, ಜೂ.13: ಬಂಗಾಳವನ್ನು ಗುಜರಾತ್ ಆಗಿಸಲು ತಾನು ಬಿಜೆಪಿಗೆ ಆಸ್ಪದ ನೀಡುವುದಿಲ್ಲ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನೆ, ಪ.ಬಂಗಾಳ ಈಗಾಗಲೇ ಗುಜರಾತ್ ಆಗಿ ಮಾರ್ಪಟ್ಟಿದೆ. ಮುಂದೆ ಅಯೋಧ್ಯೆ ಅಥವಾ ವಾರಣಾಸಿಯಾಗಿ ಮಾರ್ಪಾಡಾಗಬಹುದು ಎಂದು ಹೇಳಿದೆ.

 ಮಮತಾ ಬ್ಯಾನರ್ಜಿ ಮಿತಿಮೀರಿದ ಕ್ರಮಗಳಿಂದ ಬಂಗಾಳದಲ್ಲಿ ನಿದ್ದೆಯಲ್ಲಿದ್ದ ಹಿಂದೂಗಳನ್ನು ಎಚ್ಚರಿಸಿದ್ದಾರೆ. ಮುಂದೆ ಅವರ ಪತನಕ್ಕೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ಹೇಳಲಾಗಿದೆ. ಪ.ಬಂಗಾಳದಲ್ಲಿ ‘ಜೈ ಶ್ರೀರಾಂ’ ಘೋಷಣೆಯ ಬಗ್ಗೆ ಮಮತಾರ ನಿಲುವನ್ನೂ ಖಂಡಿಸಲಾಗಿದೆ. ಆ ರಾಜ್ಯದಲ್ಲಿ ಜೈ ಶ್ರೀರಾಂ ಎಂದು ಘೋಷಿಸುವುದು ಅಪರಾಧವಾಗಿದೆ. ಅದರ ವಿರುದ್ಧ ಅವರು ಜೈಹಿಂದ್ ಪೋಸ್ಟರ್ ಅಂಟಿಸಿದ್ದಾರೆ. ಇದೇ ರೀತಿ ಮುಂದುವರಿದು ರಾಮದೇವರು ಸಿಟ್ಟಿಗೆದ್ದರೆ ಪ.ಬಂಗಾಳವು ವಾರಣಾಸಿ ಅಥವಾ ಅಯೋಧ್ಯೆಯಾಗಿ ಮಾರ್ಪಾಡಾಗಬಹುದು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News