ಪೊಲೀಸ್ ನಿರೀಕ್ಷಕರ ಪುನರ್ ವರ್ಗಾವಣೆ

Update: 2019-06-14 11:37 GMT

ಮಂಗಳೂರು, ಜೂ.14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ಪೊಲೀಸ್ ನಿರೀಕ್ಷಕರನ್ನು ಮೂಲ ಸ್ಥಾನಗಳಿಗೆ ಪುನರ್ ವರ್ಗಾವಣೆ ಮಾಡಲಾಗಿದೆ.

ನಗರದಿಂದ ನಿರ್ಗಮನ: ಮುಲ್ಕಿ ಠಾಣೆ ಇನ್‌ಸ್ಪೆಕ್ಟರ್ ಸಿದ್ದರಾಜು ಪಿ.ಎಂ. ಮೈಸೂರು ಅಶೋಕಪುರಂ, ಬರ್ಕೆ ಠಾಣೆ ಇನ್‌ಸ್ಪೆಕ್ಟರ್ ಸೂರಜ್ ಪಿ.ಎ. ಮೈಸೂರು ದೇವರಾಜ ಟ್ರಾಫಿಕ್ ಠಾಣೆಗೆ, ಉರ್ವ ಠಾಣೆ ಇನ್‌ಸ್ಪೆಕ್ಟರ್ ಗುರುಪ್ರಸಾದ್ ಮೈಸೂರು ಹೆಬ್ಬಾಳ, ಮಂಗಳೂರು ಪಶ್ಚಿಮ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಟಿ. ಮೈಸೂರು ನಗರ ಸಿಸಿಐಬಿ, ಕಂಕನಾಡಿ ಠಾಣೆ ಇನ್‌ಸ್ಪೆಕ್ಟರ್ ಜಗದೀಶ್ ಆರ್. ಮೈಸೂರು ಕೆ.ಆರ್. ಟ್ರಾಫಿಕ್ ಠಾಣೆಗೆ ಮರು ವರ್ಗಾಚಣೆ ಮಾಡಲಾಗಿದೆ.

ಮೂಡುಬಿದಿರೆ ಇನ್‌ಸ್ಪೆಕ್ಟರ್ ಗಂಗಾಧರ ಎಸ್. ಮೂಡುಬಿದಿರೆ ಮೈಸೂರು ಲಕ್ಷ್ಮೀಪುರಂ ಠಾಣೆಗೆ, ಸಿಸಿಬಿ ಮಂಗಳೂರು ನಗರ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ರಾಜೇಂದ್ರ ಹುಬ್ಬಳ್ಳಿ-ಧಾರವಾಡ ಸಿಸಿಬಿ, ಸಿಸಿಆರ್‌ಬಿ ಮಂಗಳೂರು ನಗರ ಕೆಎಲ್‌ಎ ರೇವಣ್ಣ, ಮಂಗಳೂರು ಸಿಸಿಬಿ ವಿಶೇಷ ಠಾಣೆಗೆ ಎಸಿಬಿ ಸತೀಶ್ ಜಿ.ಜೆ ಎಸಿಬಿಗೆ, ಮಂಗಳೂರು ನಗರ ಎಸ್‌ಬಿ ಇನ್‌ಸ್ಪೆಕ್ಟರ್ ಅನೂಪ್ ಮೇದಪ್ಪ ಮಡಿಕೇರಿ ನಗರ, ಕದ್ರಿ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಎಂ. ಡಿಸಿಐಬಿ ಕೊಡಗು, ಮಂಗಳೂರು ಉತ್ತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ದಿವಾಕರ್ ಸಿ.ಎನ್. ಗೋಣಿಕೊಪ್ಪಕ್ಕೆ ವರ್ಗಾಯಿಸಲಾಗಿದೆ.

ಮಂಗಳೂರು ದಕ್ಷಿಣ ಠಾಣೆ ಇನ್‌ಸ್ಪೆಕ್ಟರ್ ಕೌಮರಾದಿ ವಿರಾಜಪೇಟೆ, ಪಣಂಬೂರು ಇನ್‌ಸ್ಪೆಕ್ಟರ್ ಸತ್ಯನಾರಾಯಣ ಕೆ. ಡಿಸಿಐಬಿ ಚಿಕ್ಕಮಗಳೂರು, ಬ್ರಹ್ಮಾವರ ಠಾಣೆ ಇನ್‌ಸ್ಪೆಕ್ಟರ್ ಪೂವಯ್ಯ ಕೆ.ಸಿ. ಹುನಸೂರು ಠಾಣೆಗೆ, ಮಣಿಪಾಲ ಠಾಣೆ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಡಿಸಿಐಬಿ ಮೈಸೂರು, ಹರೀಶ್ ಕೆ. ಪಾಟೀಲ್ ಮಂಗಳೂರು ಉತ್ತರ ಟ್ರಾಫಿಕ್ ಠಾಣೆಯಿಂದ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.

ನಗರಕ್ಕೆ ಆಗಮನ: ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಶಾಂತಾರಾಮ್ ಅವರನ್ನು ಮಂಗಳೂರು ನಗರ ಸಿಸಿಬಿ ಇನ್‌ಸ್ಪೆಕ್ಟರ್, ಮೈಸೂರು ಅಶೋಕಪುರಂ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಅವರನ್ನು ಮೂಲ್ಕಿ ಇನ್‌ಸ್ಪೆಕ್ಟರ್, ಮೈಸೂರು ಉದಯಗಿರಿ ಇನ್‌ಸ್ಪೆಕ್ಟರ್ ಉಮೇಶ್ ಅವರನ್ನು ಬರ್ಕೆ ಇನ್‌ಸ್ಪೆಕ್ಟರ್, ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮುಹಮ್ಮದ್ ಶರ್ೀ ಅವರನ್ನು ಉರ್ವ ಠಾಣೆಗೆ ವರ್ಗಾಯಿಸಲಾಗಿದೆ.

ಎಸಿಬಿಯ ಮೋಹನ್ ಕೊಟ್ಟಾರಿ ಅವರನ್ನು ಮಂಗಳೂರು ಸಿಟಿ ಎಸ್‌ಬಿ ವಿಭಾಗ, ದೇವರಾಜ್ ಟ್ರಾಫಿಕ್ ಅಮಾನುಲ್ಲಾ ಅವರನ್ನು ಟ್ರಾಫಿಕ್ ಪಶ್ಚಿಮ ಇನ್‌ಸ್ಪೆಕ್ಟರ್, ಮೈಸೂರು ಕೆ.ಆರ್. ಟ್ರಾಫಿಕ್ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಅವರನ್ನು ಕಂಕನಾಡಿ ಠಾಣೆಗೆ, ಸಿದ್ಧಾರ್ಥನಗರ ಟ್ರಾಫಿಕ್ ಠಾಣೆ ಇನ್‌ಸ್ಪೆಕ್ಟರ್ ಗುರುದತ್ತ್ ಕಾಮತ್ ಅವರನ್ನು ಟ್ರಾಫಿಕ್ ದಕ್ಷಿಣ ಠಾಣೆಗೆ ಮರು ವರ್ಗಾಯಿಸಲಾಗಿದೆ.

ಡಿಸಿಆರ್‌ಇ ಇನ್‌ಸ್ಪೆಕ್ಟರ್ ಮಾರುತಿ ನಾಯಕ್ ಕದ್ರಿ ಠಾಣೆಗೆ, ಸಿಎಸ್‌ಪಿ ಠಾಣೆ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಅವರನ್ನು ಮಂಗಳೂರು ಟ್ರಾಫಿಕ್ ಪೂರ್ವ ಠಾಣಾ ಇನ್‌ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಅಧಿಕಾರಿಗಳು ನೇಮಕಗೊಂಡ ಠಾಣೆಯಲ್ಲಿ ಕೂಡಲೇ ವರದಿ ಮಾಡಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News