ಬಿಹಾರ: ವೃದ್ಧರಿಗೆ ಪಿಂಚಣಿ ಯೋಜನೆ ಘೋಷಣೆ

Update: 2019-06-14 15:31 GMT

ಪಾಟ್ನಾ, ಜೂ. 14: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಬಡವರಿಗೆ ಮುಖ್ಯಮಂತ್ರಿ ವೃದ್ಧ ಪಿಂಚಣಿ ಯೋಜನೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಘೋಷಿಸಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟವರು ತಿಂಗಳಿಗೆ 400 ರೂಪಾಯಿ ಪಿಂಚಣಿ, 80 ವರ್ಷಕ್ಕಿಂತ ಮೇಲ್ಪಟ್ಟವರು ತಿಂಗಳಿಗೆ 500 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ.

ಈ ಯೋಜನೆ 2019 ಎಪ್ರಿಲ್ 1ರಿಂದ ಜಾರಿಗೆ ಬಂದಿದೆ. ಆದರೆ, ಈ ಯೋಜನೆ ನಿವೃತ್ತ ಸರಕಾರಿ ಉದ್ಯೋಗಿಗಳನ್ನು ಒಳಗೊಳ್ಳದು. ಬಡ ವೃದ್ಧರು ಗೌರವಯುತ ಹಾಗೂ ಘನತೆಯಿಂದ ಜೀವಿಸಲು ರಾಜ್ಯ ಸರಕಾರ ಈ ಯೋಜನೆಗಾಗಿ 18 ಸಾವಿರ ಕೋಟಿ ರೂಪಾಯಿ ವಿಶೇಷ ನಿಧಿ ರೂಪಿಸಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಇದುವರೆಗೆ 2 ಲಕ್ಷ ಜನರು ಪಿಂಚಣಿಗಾಗಿ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಸಂಖ್ಯೆ 35ರಿಂದ 36 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News