ಪ.ಬಂಗಾಳದಲ್ಲಿ 300 ವೈದ್ಯರ ರಾಜೀನಾಮೆ

Update: 2019-06-14 15:42 GMT

ಹೊಸದಿಲ್ಲಿ, ಜೂ.14: ವೈದ್ಯರ ಮೇಲಿನ ಹಲ್ಲೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ಮುಂದುವರಿದಿದ್ದು, ಸರಕಾರಿ ಆಸ್ಪತ್ರೆಯ ಸೇವೆಗೆ 300 ವೈದ್ಯರು ರಾಜೀನಾಮೆ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಸುರಕ್ಷತೆ ಹೆಚ್ಚಿಸಲು ಆಗ್ರಹಿಸಿ ಪಶ್ಚಿಮ ಬಂಗಾಳದ ವೈದ್ಯರು ಆರಂಭಿಸಿದ ಮುಷ್ಕರ ದೇಶವ್ಯಾಪಿ ನಡೆಯುತ್ತಿದೆ. ಇಂದು ದೇಶದ ಹಲವೆಡೆ ವೈದ್ಯರು ಕರ್ತವ್ಯಕ್ಕೆ ಗೈರಾಗುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News