ಹಡಗಿನ ಸಿಬ್ಬಂದಿಯ ವೀಡಿಯೊ ಬಿಡುಗಡೆ ಮಾಡಿದ ಇರಾನ್

Update: 2019-06-14 15:43 GMT

ಟೆಹರಾನ್, ಜೂ. 14: ಒಮಾನ್ ಸಮುದ್ರದಲ್ಲಿ ಗುರುವಾರ ದಾಳಿಗೊಳಗಾದ ಎರಡು ತೈಲ ಟ್ಯಾಂಕರ್‌ಗಳ ಪೈಕಿ ಒಂದರ ಸಿಬ್ಬಂದಿಯ ಚಿತ್ರಗಳನ್ನು ಇರಾನ್‌ನ ಇಂಗ್ಲಿಷ್ ಭಾಷೆಯ ಟಿವಿ ಚಾನೆಲ್ ‘ಪ್ರೆಸ್ ಟಿವಿ’ ಪ್ರಸಾರ ಮಾಡಿದೆ ಹಾಗೂ ಅವರೆಲ್ಲರೂ ‘ಸಂಪೂರ್ಣ ಆರೋಗ್ಯದಲ್ಲಿ’ ಇದ್ದಾರೆ ಎಂದು ಹೇಳಿದೆ.

‘‘ಹಡಗಿನಲ್ಲಿರುವ ನಾವಿಕರಿಗೆ ಸಹಾಯ ಮಾಡಲು ಇರಾನ್ ನಿರಾಕರಿಸಿದೆ ಎಂಬ ಕೆಲವು ಮಾಧ್ಯಮಗಳ ಸುಳ್ಳು ವರದಿಗಳನ್ನು ಈ ವೀಡಿಯೊ ತಳ್ಳಿ ಹಾಕುತ್ತದೆ’’ ಎಂದು ಪ್ರೆಸ್ ಟಿವಿ ಹೇಳಿದೆ.

‘ಫ್ರಂಟ್ ಅಲ್ಟಾಯರ್’ ಹಡಗಿನ 23 ಸಿಬ್ಬಂದಿ ಕೋಣೆಯೊಂದರಲ್ಲಿ, ದೇಶದ ಸರ್ವೋನ್ನತ ನಾಯಕ ಆಯತುಲ್ಲಾ ಖಾಮಿನೈ ಮಾಡುತ್ತಿರುವ ಭಾಷಣವನ್ನು ಸರಕಾರಿ ಟಿವಿಯಲ್ಲಿ ನೋಡುತ್ತಿರುವಂತೆ ವೀಡಿಯೊ ತೋರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News