ಋತುಚಕ್ರದ ನೋವಿಗೆ ಲೇಬಲ್ ರಹಿತ ಮಾತ್ರೆ ಪೂರೈಸುತ್ತಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗಳು!

Update: 2019-06-14 16:30 GMT

ಚೆನ್ನೈ, ಜೂ. 14: ಉತ್ಪಾದನೆಗೆ ಅಡ್ಡಿಯಾಗುವ ಕಾರಣಕ್ಕೆ ಮಹಿಳೆಯರ ಋತಚಕ್ರದ ನೋವಿಗೆ ಲೆಬಲ್ ರಹಿತ ಮಾತ್ರೆಗಳನ್ನು ಪೂರೈಸುತ್ತಿರುವುದು ತಮಿಳುನಾಡಿನ ಬಹುಕೋಟಿ ಡಾಲರ್ ಗಾರ್ಮೆಂಟ್ಸ್ ಉದ್ಯಮದಲ್ಲಿ ಬೆಳಕಿಗೆ ಬಂದಿದೆ.

ತಮಿಳುನಾಡಿನ ಗಾರ್ಮೆಂಟ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸುಮಾರು 100 ಮಹಿಳೆಯರ ಸಂದರ್ಶನದ ಆಧಾರದಲ್ಲಿ ಥಾಮಸ್ ರಾಯ್ಟರ್ ಫೌಂಡೇಶನ್ ಈ ಆಘಾತಕಾರಿ ವಿಷಯವನ್ನು ಬಹಿರಂಗಗೊಳಿಸಿದೆ. ಈ ಔಷಧವನ್ನು ವೈದ್ಯರು ಅಪರೂಪಕ್ಕೆ ನೀಡುತ್ತಾರೆ. ಇದು ಕಾರ್ಮಿಕ ಕಾನೂನಿನ ಉಲ್ಲಂಘನೆ. ಥಾಮಸ್ ರಾಯ್ಟರ್ ಫೌಂಡೇಶನ್‌ನ ವರದಿಯ ಆಧಾರದಲ್ಲಿ ಗಾರ್ಮೆಂಟ್ಸ್ ಕಾರ್ಮಿಕರ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ.

ಈ ಮಾತ್ರೆಯ ಬಗ್ಗೆ ನಮಗೆ ಮಾಹಿತಿ ನೀಡದೇ ಇರುವುದರಿಂದ ಇದರ ಅಡ್ಡ ಪರಿಣಾಮಗಳಾದ ಖಿನ್ನತೆ, ಉದ್ವಿಗ್ನತೆ, ಮೂತ್ರ ನಾಳದ ಸೋಂಕು, ಗಡ್ಡೆ ಹಾಗೂ ಗರ್ಭಪಾತದ ಬಗ್ಗೆ ತಿಳಿದುಕೊಳ್ಳಲು ಹಲವು ವರ್ಷಗಳೇ ಹಿಡಿಯಿತು ಎಂದು ಹಲವು ಮಹಿಳೆಯರು ಹೇಳಿದ್ದಾರೆ. ಥಾಮ್ಸನ್ ರಾಯ್ಟರ್ಸ್‌ ಫೌಂಡೇಶನ್‌ಗೆ ಮಹಿಳೆಯರು ನೀಡಿದ ಮಾತ್ರೆಗಳಲ್ಲಿ ಯಾವುದೇ ಬ್ರಾಂಡ್ ಹೆಸರಾಗಲಿ, ಅಂಶಗಳ ಹೆಸರಾಗಲಿ, ಅಂತಿಮ ದಿನಾಂಕವಾಗಲಿ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News