ಮೋರ್ಗನ್ಸ್‌ಗೇಟ್‌ನಲ್ಲಿ ತರಕಾರಿ ಅಂಗಡಿ ಮೇಲೆ ಉರುಳಿಬಿದ್ದ ಮರ

Update: 2019-06-15 06:20 GMT

ಮಂಗಳೂರು, ಜೂ.15: ನಗರದ ಮೋರ್ಗನ್ಸ್‌ಗೇಟ್ ಬಳಿಯ ರಸ್ತೆ ಬದಿಯಲ್ಲಿರುವ ತರಕಾರಿ ಹಾಗೂ ಹಣ್ಣು ಹಂಪಲು ಅಂಗಡಿಯೊಂದರ ಮೇಲೆ ಬೃಹತ್ ಮರವೊಂದು ಉರುಳಿಬಿದ್ದ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಇಂದು ಮುಂಜಾನೆ ಸುರಿದ ಗಾಳಿಮಳೆಗೆ ರಸ್ತೆ ಬದಿಯಲ್ಲಿದ್ದ ಮರ ಅಂಗಡಿಯ ಮೇಲೆ ಉರುಳಿದೆ. ಇದರಿಂದ ಅಂಗಡಿ ಭಾಗಶಃ ಜಖಂಗೊಂಡಿದ್ದು, ಸಾವಿರಾರು ರೂ. ನಷ್ಟ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News