ಶ್ರೀನಿವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಮೊನೊವೀಲ್ ಬೈಕ್!

Update: 2019-06-15 12:25 GMT

ಮಂಗಳೂರು, ಜೂ.15: ಕೃಷಿ ಉಳುಮೆ ಮತ್ತು ಕೈಗಾರಿಕಾ ಉದ್ದೇಶವನ್ನಿಟ್ಟುಕೊಂಡು ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಸಂಸ್ಥೆಯ ಆಟೋಮೊಬೈಲ್ ವಿಭಾಗದ ವಿದ್ಯಾರ್ಥಿಗಳು ಸರಳೀಕೃತವಾದ ಮೊನೊವೀಲ್ ಬೈಕ್‌ನ್ನು ನಿರ್ಮಾಣ ಮಾಡಿದ್ದಾರೆ.

ಶ್ರೀನಿವಾಸ ತಾಂತ್ರಿಕ ಮಹಾವಿದಾಲಯದ ನಾಲ್ಕನೇ ವರ್ಷದ ಮೋಟಾರು ವಾಹನ ವಿಭಾಗದ ವಿದ್ಯಾರ್ಥಿಗಳಾದ ಮೋಹಿತ್ ಎನ್. ಮಾಧವ, ಪೃಥ್ವಿ ಎಚ್. ಆಚಾರ್ಯ, ನವೀನ್ ಅಮರಣ್ಣವರ, ಪ್ರಮೋದ್ ಜಿ.ಎಲ್. ಸರಳೀಕೃತ ಮೊನೊವಿಲ್ ಬೈಕ್‌ನ್ನು ಮರು ವಿನ್ಯಾಸಗೊಳಿಸಿದವರು ಎಂದು ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಸಂತೋಷ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ಚಕ್ರದ ಬೈಕ್ ‘ಮೊನೊವೀಲ್’ ಹೊರ ಚಾಲನೆಯಲ್ಲಿರುವ ಏಕಚಕ್ರವನ್ನು ಹೊಂದಿದ್ದು, ಚಾಲಕನು ವೃತ್ತಾಕಾರದ ಚೌಕಟ್ಟಿನಲ್ಲಿ ಕುಳಿತುಕೊಳ್ಳುತ್ತಾನೆ. ದ್ವಿಚಕ್ರ ವಾಹನ ಆವರಿಸಿರುವ ಜಾಗವನ್ನು ಕಡಿಮೆ ಮಾಡುವುದು ಮತ್ತು ಅದನ್ನು ಒಂದು ಚಕ್ರದೊಂದಿಗೆ ಬದಲಿಸುವುದು ಮೊನೊವೀಲ್‌ನ ಮುಖ್ಯ ಗುರಿಯಾಗಿದೆ. ಇದನ್ನು ಕೃಷಿ ಉಳುಮೆಗೆ ಸುಲಭವಾಗಿ ಬಳಸಬಹುದಾಗಿದೆ ಎಂದು ಪೃಥ್ವಿ ಎಸ್. ಆಚಾರ್ಯ ಮಾಹಿತಿ ನೀಡಿದರು.

 ಮೊನೊವೀಲ್‌ನ್ನು ಚಾಲಕನು ಸಾಮಾನ್ಯ ದ್ವಿಚಕ್ರ ವಾಹನದಂತೆಯೇ ಸಮತೋಲನ ಮಾಡಬಹುದಾಗಿದೆ. ಮೊನೊವೀಲ್‌ನ ಹೆಚ್ಚುವರಿ ಸಮತೋಲನಕ್ಕೆ ಗೈರೋಸ್ಕೋಪಿಕ್ ಸಂವೇದಕಗಳನ್ನು ಬಳಸುವುದರ ಮೂಲಕ ನವೀಕರಿಸಬಹುದು. ಈ ವಾಹನವನ್ನು ಕೇವಲ 18 ಸಾವಿರ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೊನೊವೀಲ್ ಆವಿಷ್ಕರಿಸಿದ ವಿದಾರ್ಥಿಗಳಾದ ಮೋಹಿತ್ ಎನ್.ಮಾಧವ, ನವೀನ್ ಅಮರಣ್ಣವರ, ಪ್ರಮೋದ್ ಜಿ.ಎಲ್.ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News