ಅಸಾಹಯಕ ಗರ್ಭಿಣಿಗೆ ನೆರವು: ಜೋಪಡಿಯಲ್ಲಿಯೇ ಹೆರಿಗೆ

Update: 2019-06-15 11:12 GMT

ಉಡುಪಿ, ಜೂ.15: ಕೊಡಂಕೂರು ಬಯಲು ಪ್ರದೇಶದಲ್ಲಿ ಜೋಪಡಿ ಯಲ್ಲಿ ಪ್ರಸವ ವೇದನೆಯಿಂದ ಅಸಹಾಯಕರಾಗಿ ನರಳುತ್ತಿದ್ದ ಅಲೆಮಾರಿ ಜನಾಂಗದ ಗರ್ಭಿಣಿಯೊಬ್ಬರಿಗೆ ಮೂಲಸೌಕರ್ಯಕ್ಕಾಗಿ ಸಮಾಜ ಸೇವಕರು ತುರ್ತು ಧನ ಸಹಾಯ ಮಾಡಿ ಮಾನವೀಯತೆ ಮರೆದ ಘಟನೆ ಶನಿವಾರ ನಡೆದಿದೆ.

ಮಾಹಿತಿ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ 108 ಅಂಬ್ಯುಲೆನ್ಸ್ ನೊಂದಿಗೆ ಸ್ಥಳಕ್ಕೆ ಧಾವಿಸಿ ಬಂದರು. ಆದರೆ ಶುಶ್ರೂಕ ಸಿಬ್ಬಂದಿಗಳು ಸ್ಥಳಕ್ಕೆ ಬರುವ ಮೊದಲೆ ಮಹಿಳೆ ಜೋಪಡಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದರು. ನಂತರ ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಸರಕಾರಿ ಹೆರಿಗೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಗರ್ಭಿಣಿ ಮಹಿಳೆಯನ್ನು ಶಿರಸಿ ಮೂಲದ ಜಲಕ್ಕ (24)ಎಂದು ತಿಳಿದು ಬಂದಿದೆ. ಪ್ರಸವದ ದಿನಗಳು ಹತ್ತಿರ ಇರುವಾಗ ಪತಿ ಕೃಷ್ಣ ಕೆಲಸಕ್ಕೆ ತೆರಳಿದ್ದು, ಮಹಿಳೆಗೆ ಅಸಹಾಯಕತೆ ಎದುರಾಯಿತೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News