ಬೈಂದೂರು: ಕಟ್ಟಡ ಕಾರ್ಮಿಕರ ಆಧಾರ ಲಿಂಕ್‌ಗಾಗಿ ಹೆಚ್ಚುವರಿ ಕೇಂದ್ರಕ್ಕೆ ಮನವಿ

Update: 2019-06-15 12:25 GMT

ಬೈಂದೂರು, ಜೂ.15: ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೈಂದೂರಿನಲ್ಲಿ ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೆಚ್ಚುವರಿ ಕೇಂದ್ರವನ್ನು ತೆರೆಯಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಬೈಂದೂರು ತಹಶಿಲ್ದಾರ್ ಬಸಪ್ಪಪೂಜಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕರಿಗೆ ನವೀಕರಣ, ನೋಂದಣಿ, ವಿವಿಧ ಸೌಲಭ್ಯ ಗಳನ್ನು ಇ-ಆಡಳಿತ ಅಭಿವೃದ್ಧಿಪಡಿಸಿರುವ ಸೇವಾ ಸಿಂಧು ತಂತ್ರಾಂಶದ ಮೂಲಕ 2019ರ ಜೂ.1ರಿಂದ ಜಾರಿಗೊಳಿಸಿದೆ. ಕಟ್ಟಡ ಕಾರ್ಮಿಕರು ಸೌಲಭ್ಯ ಪಡೆಯಲು ಅರ್ಜಿಗಳನ್ನು ನಿಗದಿತ ದಿನದ ಒಳಗೆ ಸಲ್ಲಿಸಬೇಕಾಗಿರುವು ದರಿಂದ ಬಹುತೇಕ ಕಟ್ಟಡ ಕಾರ್ಮಿಕರು ಮೊಬೈಲ್ ಸಂಖ್ಯೆಗಳನ್ನು ಆಾರ್ ಕಾರ್ಡ್‌ಗಳಿಗೆ ಹೊಂದಿಸಬೇಕಾಗಿದೆ.

ಆದರೆ ಬೈಂದೂರು ನಾಡ ಕಛೇರಿಯಲ್ಲಿ ಒಂದೇ ಕೇಂದ್ರವಿರುವುದರಿಂದ ಕಾರ್ಮಿಕರು ಲಿಂಕ್ ಮಾಡಲು ತಿಂಗಳುಗಟ್ಟಲೇ ಕಾಯಬೇಕಾಗಿದೆ. ಇದ ರಿಂದಾಗಿ ಬಹಳಷ್ಟು ಕಾರ್ಮಿಕರು ಆ ಸೌಲಭ್ಯಗಳಿಂದ ವಂಚಿತರಾಗುವಂತಾ ಗಿದೆ. ಪ್ರತಿ ಗ್ರಾಪಂಗಳಲ್ಲಿ ಇಂತಹ ಕೇಂದ್ರ ಸ್ಥಾಪಿಸಿದರೆ ಕಾರ್ಮಿಕರು ಕೆಲಸ ನಷ್ಟ ಮಾಡಿ ಅಲೆದಾಡುವುದು ತಪ್ಪಿಸಬಹುದು ಎಂದು ಸಿಐಟಿಯು ಮನವಿ ಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕೋಶಾಧಿಕಾರಿ ಸುರೇಶ್ ಕಲ್ಲಾಗರ, ಪ್ರಧಾನ ಕಾರ್ಯದರ್ಶಿ ಗಣೇಶ್ ತೊಂಡೆಮಕ್ಕಿ, ಪದಾಧಿಕಾರಿಗಳಾದ ಗಣೇಶ್ ಮೊಗವೀರ, ವೆಂಕಟೇಶ್ ಕೋಣಿ, ನಾಗರತ್ನ ನಾಡ, ಮಂಜು ಪಡುವರಿ ಮೊದ ಲಾದವರು ಉಪಸ್ಥಿತರಿದ್ದರು.

ಬಾಕಿ ವೇತನಕ್ಕೆ ಆಗ್ರಹ: ಆಧಾರ್ ಲಿಂಕ್ ಮಾಡುವ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಗುತ್ತಿಗೆದಾರರು ವೇತನ ನೀಡದೇ ಬಾಕಿ ಇರಿಸಿಕೊಂಡಿರುವುದು ಖಂಡನೀಯ. ಜಿಲ್ಲಾಧಿಕಾರಿ ಕೂಡಲೇ ಮಧ್ಯಪ್ರವೇಶಿಸಿ ವೇತನ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಘ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News