ಹಾಡಹಗಲೇ ವಕೀಲೆ ಹತ್ಯೆ ಪ್ರಕರಣ; ಉತ್ತರಪ್ರದೇಶ ಜಂಗಲ್ರಾಜ್ ಎಂಬುದು ಸಾಬೀತು- ಎಸ್‌ಡಿಪಿಐ

Update: 2019-06-15 15:54 GMT

ಹೊಸದಿಲ್ಲಿ, ಜೂ.15: ಆಗ್ರಾದ ನ್ಯಾಯಾಲಯದ ಆವರಣದಲ್ಲೇ ಹಾಡಹಗಲೇ ನಡೆದ ವಕೀಲೆ ದರ್ವೇಶ್ ಸಿಂಗ್ ಯಾದವ್ ಅವರ ಹತ್ಯೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸಿದೆ.

ಈ ಕ್ರೂರ ಹತ್ಯೆಯು ಮುಖ್ಯಮಂತ್ರಿ ಆದಿತ್ಯನಾಥ್ ಆಡಳಿತದ ಉತ್ತರಪ್ರದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಂಗಲ್ರಾಜ್‌ಗೆ ಸರಕಾರ ಶರಣಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಕೇಸರಿಯ ಮುಖವಾಡ ಧರಿಸಿದ ನಕಲಿ ಪವಿತ್ರ ವ್ಯಕ್ತಿ ಆದಿತ್ಯನಾಥ್ ಅವರ ಹಿನ್ನೆಲೆ ಭಯಾನಕವಾಗಿದ್ದು ಕೊಲೆ, ಗಲಭೆ, ಕೋಮುದ್ವೇಷ, ಹಿಂಸಾಚಾರ ಇತ್ಯಾದಿ ಹಲವು ಕ್ರಿಮಿನಲ್ ಮೊಕದ್ದಮೆಯ ದಾಖಲೆ ಹೊಂದಿ ಅಧಿಕಾರಕ್ಕೆ ಬಂದಿದ್ದಾರೆ. ಕೇಸರಿ ಮತ್ತು ಅದರ ಅಂಗಸಂಸ್ಥೆಗಳ ಪ್ರೋತ್ಸಾಹ ಅಪರಾಧಿಗಳು ನಿರ್ಭಯರಾಗಿರುತ್ತಾರೆ ಮತ್ತು ಅವರು ರಾಜ್ಯವನ್ನು ಆಳುತ್ತಿದ್ದಾರೆ.

ಅಪರಾಧಿಗಳು ರಾಜಾರೋಷವಾಗಿ ಓಡಾಡುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಮತ್ತು ನ್ಯಾಯವಾದಿ ದರ್ವೆಶ್ ಸಿಂಗ್ ಯಾದವ್‌ರ ಹತ್ಯೆಯ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News