ಮಳೆನೀರು ಸಂರಕ್ಷಿಸುವಂತೆ ಗ್ರಾಮ ಪಂಚಾಯತ್‌ಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

Update: 2019-06-15 17:32 GMT

ಹೊಸದಿಲ್ಲಿ, ಜೂ.15: ದೇಶದ ಗ್ರಾಮ ಪಂಚಾಯತ್‌ಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ಮಳೆನೀರನ್ನು ಸಂರಕ್ಷಿಸುವಂತೆ ಮತ್ತು ಅದನ್ನು ಜನರ ಚಳುವಳಿಯಾಗಿ ಮಾಡುವಂತೆ ಕರೆ ನೀಡಿದ್ದಾರೆ.

 ಮಳೆ ನೀರನ್ನು ಸಂರಕ್ಷಿಸುವ ಸಲುವಾಗಿ ತಮ್ಮ ಗ್ರಾಮದಲ್ಲಿ ಜಲಮೂಲಗಳನ್ನು ಒಂದೋ ಸರಿಪಡಿಸುವಂತೆ ಅಥವಾ ನಿರ್ಮಿಸುವಂತೆ ಮೋದಿ, ಗ್ರಾಮ ಮುಖ್ಯಸ್ಥರಿಗೆ ಆಗ್ರಹಿಸಿದ್ದಾರೆ. ಮುಂಗಾರು ಇನ್ನೇನು ಆರಂಭವಾಗಿದೆ. ನಮಗೆ ದೇವರು ಸಾಕಷ್ಟು ಪ್ರಮಾಣದಲ್ಲಿ ಮಳೆನೀರು ಒದಗಿಸುತ್ತಿರುವುದು ನಮ್ಮ ಅದೃಷ್ಟ. ಪ್ರಕೃತಿಯ ಈ ಉಡುಗೊರೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಮುಂಗಾರು ಆರಂಭವಾಗುತ್ತಿದ್ದಂತೆ ಸಾಧ್ಯವಾದಷ್ಟು ನೀರನ್ನು ಸಂರಕ್ಷಿಸಲು ನಾವು ವ್ಯವಸ್ಥೆ ಮಾಡಬೇಕು ಎಂದು ಮೋದಿ ತನ್ನ ಪತ್ರದಲ್ಲಿ ಬರೆದಿದ್ದಾರೆ.

 ಇದನ್ನು ಮಾಡಲು ಸಾಧ್ಯವಾದರೆ ಕೇವಲ ಬೆಳೆ ಇಳುವರಿ ಹೆಚ್ಚಾಗುವುದು ಮಾತ್ರವಲ್ಲ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುವ ಮೂಲಕ ಅದನ್ನು ನಮ್ಮ ದೈನಂದಿನ ಕಾರ್ಯಗಳಿಗೆ ಬಳಸಬಹುದಾಗಿದೆ ಎಂದು ಮೋದಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ. ಆಯಾ ಗ್ರಾಮಗಳಲ್ಲಿ ಸಭೆ ಕರೆದು ಈ ಪತ್ರವನ್ನು ಜೋರಾಗಿ ಜನರ ಮುಂದೆ ಓದುವಂತೆ ಗ್ರಾಮ ಪಂಚಾಯತ್ ಮುಖ್ಯಸ್ಥರಿಗೆ ಮೋದಿ ಆಗ್ರಹಿಸಿದ್ದಾ.

æ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News