ಕಬ್ಬಿಣದ ಸರಪಳಿ, ಹಗ್ಗ ಬಿಗಿದು ನದಿಗೆ ಧುಮುಕಿದ ಜಾದೂಗಾರ ನಾಪತ್ತೆ

Update: 2019-06-16 17:52 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ಜೂ. 16: ಕಬ್ಬಿಣದ ಸರಪಳಿ ಹಾಗೂ ಹಗ್ಗದಿಂದ ಕಟ್ಟಿಸಿಕೊಂಡು ರವಿವಾರ ಗಂಗಾ ನದಿಗೆ ಧುಮುಕಿದ ಜಾದುಗಾರ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 'ಜಾದುಗಾರ್ ಮಾಂಡ್ರೇಕ್' ಎಂದು ಜನಪ್ರಿಯರಾಗಿರುವ ಚಂಚಲ್ ಲಹರಿ ಕುಟುಂಬದ ಸದಸ್ಯರು, ಪತ್ರಕರ್ತರು ಹಾಗೂ ಪೊಲೀಸರು ದಂಡೆಯಲ್ಲಿ ನಿಂತು ನೋಡುತ್ತಿರುವಂತೆ ನದಿ ಪ್ರವೇಶಿಸಿದ್ದರು. ಆದರೆ, 40ರ ಹರೆಯದ ಚಂಚಲ್ ಲಹರಿ ನೀರಿನಿಂದ ಮೇಲೇಳಲು ವಿಫಲರಾಗಿದ್ದಾರೆ.

ಗಂಗಾ ನದಿಯಲ್ಲಿ ಇದೇ ಸ್ಥಳದಲ್ಲಿ 21 ವರ್ಷಗಳ ಹಿಂದೆ ನಾನು ಈ ಸಾಹಸ ಮಾಡಿದ್ದೆ ಎಂದು ಲಹರಿ ಈ ಹಿಂದೆ ಹೇಳಿದ್ದರು.

  ''ಸರಪಳಿಯಿಂದ ಕಟ್ಟಿ, ಬೀಗ ಹಾಕಿ ಬುಲೆಟ್ ಪ್ರೂಫ್ ಗಾಜಿನ ಪೆಟ್ಟಿಗೆಯಲ್ಲಿ ಇರಿಸಿ ನನ್ನನ್ನು ಹೌರಹ್ ಸೇತುವೆಯಿಂದ ಗಂಗಾ ನದಿಯಲ್ಲಿ ಮುಳುಗಿಸಲಾಗಿತ್ತು. ಅನಂತರ ನಾನು 29 ಸೆಕೆಂಡ್‌ಗಳಲ್ಲಿ ನದಿಯಿಂದ ಹೊರ ಬಂದಿದ್ದೆ'' ಎಂದು ಅವರು ತಿಳಿಸಿದ್ದರು.

 ''ನಾನು ಇದರಿಂದ ಬಿಡಿಸಿಕೊಂಡು ಹೊರಬಂದರೆ, ಅದು ಮ್ಯಾಜಿಕ್. ಆದರೆ, ಇದರಿಂದ ಬಿಡಿಸಿಕೊಂಡು ಹೊರಬರಲು ನನಗೆ ಸಾಧ್ಯವಾಗದೇ ಇದ್ದರೆ ಅದು ದುರಂತ'' ಎಂದು ಅವರು ಈ ಮಾರ್ಮಿಕವಾಗಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News