ಜೂ. 16 ರಂದು ಲೋಕಸಭೆಯ ಮೊದಲ ಅಧಿವೇಶನ: ಬಜೆಟ್, ತ್ರಿವಳಿ ತಲಾಖ್ ಪ್ರಮುಖ ಅಜೆಂಡಾ

Update: 2019-06-16 17:55 GMT

ಹೊಸದಿಲ್ಲಿ, ಜೂ. 16: ಹದಿನೇಳನೆ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ ನಡೆಯಲಿದ್ದು, ಕೇಂದ್ರ ಬಜೆಟ್ ಹಾಗೂ ತ್ರಿವಳಿ ತಲಾಖ್ ಸಹಿತ ಇತರ ಪ್ರಮುಖ ಶಾಸನಗಳು ಸರಕಾರದ ಪ್ರಮುಖ ಕಾರ್ಯ ಸೂಚಿಯಾಗಿರಲಿದೆ.

 ಲೋಕಸಭೆಯ ಮೊದಲ ಅಧಿವೇಶನದ ಮುನ್ನ ದಿನವಾದ ರವಿವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅವರು ''ಒಂದು ದೇಶ, ಒಂದು ಚುನಾವಣೆ'' ಹಾಗೂ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ಜೂನ್ 19ರಂದು ನಡೆಯಲಿರುವ ಸಭೆಗೆ ಹಾಜರಾಗುವಂತೆ ಸರ್ವಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದರು.

ಲೋಕಸಭೆಯ ಹಲವು ನೂತನ ಮುಖಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸತ್ತಿನ ಕೆಳಮನೆಯ ಮೊದಲ ಅಧಿವೇಶನ ತಾಜಾ ಉತ್ಸಾಹ ಹಾಗೂ ಹೊಸ ಚಿಂತನೆಗಳೊಂದಿಗೆ ಆರಂಭವಾಗಬೇಕು ಎಂದರು.

ಸಭೆಯಲ್ಲಿ ಕಾಂಗ್ರೆಸ್ ನಿರುದ್ಯೋಗ, ಕೃಷಿಕರ ಬಿಕ್ಕಟ್ಟು, ಬರ ಹಾಗೂ ಪತ್ರಿಕಾ ಸ್ವಾತಂತ್ರದ ಬಗ್ಗೆ ಸರಕಾರವನ್ನು ಪ್ರಶ್ನಿಸಿತು. ಅಲ್ಲದೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಆದಷ್ಟು ಬೇಗ ವಿಧಾನ ಸಭೆ ಚುನಾವಣೆ ನಡೆಸುವಂತೆ ಆಗ್ರಹಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News