ಸಂತ ಅಲೋಶಿಯಸ್ ಕಾಲೇಜಿನಲ್ಲಿ ಐಚ್ಚಿಕ ಕನ್ನಡ ಪತ್ರಿಕೋದ್ಯಮ ಆರಂಭ

Update: 2019-06-17 05:16 GMT

ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮವನ್ನು ಐಚ್ಚಿಕ ವಿಷಯವಾಗಿ ಆರಂಭಿಸಲಾಗಿದೆ.

ಪತ್ರಿಕೋದ್ಯಮದ ವಿವಿಧ ವಿಷಯಗಳ ಜೊತೆ, ಕನ್ನಡ ಪತ್ರಿಕೋದ್ಯಮವನ್ನು ವಿಶೇಷ ವಿಷಯವಾಗಿ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಈ ಮೂಲಕ ಸಿಗಲಿದೆ.

ವಿಭಾಗದ ಮುಖ್ಯಸ್ಥರಾದ ಡಾ. ಮೆಲ್ವಿನ್ ಪಿಂಟೋ ಅವರು ಹೇಳುವಂತೆ, ಕನ್ನಡ ಪತ್ರಿಕೋದ್ಯಮ ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಮಾತ್ರವಲ್ಲ ಅಂತರ್ಜಾಲಕ್ಕೂ ಅದು ಆವರಿಸಿದೆ. ಇಂದು ಉಳಿದ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಪತ್ರಿಕೋದ್ಯಮ ವೃತ್ತಿಪರತೆಯಲ್ಲಿ ಹಿಂದೆ ಬಿದ್ದಿಲ್ಲ. ಆದ್ದರಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟು ಈ ಕನ್ನದ ಐಚ್ಚಿಕ ಪತ್ರಿಕೋದ್ಯಮ ವಿಷಯವನ್ನು ಆರಂಭಿಸಲಾಗಿದೆ ಎಂದರು.

ಕನ್ನಡ ಐಚ್ಚಿಕ ಪತ್ರಿಕೋದ್ಯಮ ವಿಷಯವು ಕನ್ನಡ ಪತ್ರಿಕೋದ್ಯಮದ ಚರಿತ್ರೆ, ಪ್ರಸ್ತುತ ಕನ್ನಡ ಪತ್ರಿಕೋದ್ಯಮದ ಆಳವಾದ ವಿಶ್ಲೇಷಣೆ ಮತ್ತು ಅಧ್ಯಯನವನ್ನು ಒಳಗೊಂಡಿರುತ್ತದೆ. ಮಾತ್ರವಲ್ಲದೆ ಕನ್ನಡ ಮಾದ್ಯಮ ಮತ್ತು ಪತ್ರಗಳಿಗೆ ಬರೆಯುವ ವಿವಿಧ ವಿಧಾನಗಳನ್ನು ಪ್ರಾಯೋಗಿಕವಾಗಿ ಇಲ್ಲಿ ಕಲಿಸಲಾಗುವುದು.

ಇಂಡಿಯಾ ಟುಡೇ ಆಂಗ್ಲ ಪತ್ರಿಕೆಯು ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟದಲ್ಲಿ 33ನೇ ಸ್ಥಾನವನ್ನು ನೀಡಿದೆ. ಇಲ್ಲಿ ಕಲಿತ ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ, ಮಲಯಾಳಂ ಮತ್ತು ಕನ್ನಡ ಮಾದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಡಾ. ಪಿಂಟೋ ಹೇಳಿದರು.

ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದ ವಿದ್ಯಾರ್ಥಿಗಳು ಈ ಸ್ನಾತಕೋತ್ತರ ಪದವಿಗೆ ಅರ್ಹರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News