ಸಕ್ರಿಯ ವಿಪಕ್ಷದ ಪಾತ್ರ ಪ್ರಮುಖ, ಸಂಖ್ಯೆಗಳ ಬಗ್ಗೆ ಚಿಂತೆ ಬೇಡ: ಪ್ರಧಾನಿ ಮೋದಿ

Update: 2019-06-17 07:04 GMT

ಹೊಸದಿಲ್ಲಿ, ಜೂ.17:  ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಕ್ರಿಯ ವಿಪಕ್ಷದ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, “ಅವರು ತಮ್ಮ ಸಂಖ್ಯಾ ಬಲದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬದಲಾಗಿ ಸದನದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು'' ಎಂದು ಹೇಳಿದ್ದಾರೆ.

17ನೇ ಲೋಕಸಭಾ ಕಲಾಪದ ಆರಂಭಕ್ಕಿಂತ ಮುನ್ನ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಪ್ರಧಾನಿ  ಈ ಸಂಸತ್ ಅಧಿವೇಶನ  ಫಲಕಾರಿಯಾವುದೆಂದು ತಾವು ಆಶಿಸುವುದಾಗಿ ತಿಳಿಸಿದರು.

ಸದನದಲ್ಲಿರುವಾಗ ಎಲ್ಲಾ ಸಂಸದರು ದೇಶದ ಬಗ್ಗೆ ಯೋಚಿಸಬೇಕು ಹಾಗೂ ದೇಶದ ಹಿತಾಸಕ್ತಿಯ ವಿಚಾರಗಳನ್ನು ಚರ್ಚಿಸಬೇಕು ಎಂದು ಅವರು ತಿಳಿಸಿದರು. ``ನಾವು ಸಂಸತ್ತಿಗೆ ಆಗಮಿಸಿದಾಗ ನಾವು ಪಕ್ಷ ಹಾಗೂ ವಿಪಕ್ಷವನ್ನು ಮರೆತು  ವಿಚಾರಗಳ ಬಗ್ಗೆ ನಿಷ್ಪಕ್ಷವಾಗಿ  ಚಿಂತಿಸಬೇಕು,'' ಎಂದು ಅವರು ಸಲಹೆಯಿತ್ತರು.

ಹೊಸ ಸಂಸತ್ತು  ಹೆಚ್ಚು ಸಂಖ್ಯೆಯ ಮಹಿಳಾ ಸಂಸದರನ್ನೂ ಹೊಂದಿದೆ ಎಂದು ಅವರು ಹೇಳಿದರು. ``ಸಂಸತ್ತು ಸುಸೂತ್ರವಾಗಿ ಕಾರ್ಯಾಚರಿಸಿದಾಗ ದೇಶದ ಜನರ  ಹಲವಾರು ಆಕಾಂಕ್ಷೆಗಳನ್ನು ಈಡೇರಿಸಬಹುದೆಂದು ನನ್ನ ಅನುಭವ  ತಿಳಿಸುತ್ತದೆ.'' ಎಂದು ಪ್ರಧಾನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News