ಕ್ರಿಕೆಟ್ ಪಂದ್ಯದ ವೇಳೆ ಸೌಹಾರ್ದತೆಯ ಸಂದೇಶ ಸಾರಿದ ಭಾರತ-ಪಾಕ್ ದಂಪತಿ

Update: 2019-06-17 07:27 GMT

ಮ್ಯಾಂಚೆಸ್ಟರ್ : ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಏನೇ ಇರಲಿ, ಅವುಗಳೆಲ್ಲವನ್ನೂ ಮರೆತು ಸೌಹಾರ್ದತೆಯ ಒಗ್ಗಟ್ಟಿನ ಸಂದೇಶವೊಂದನ್ನು ಭಾರತ-ಪಾಕ್ ದಂಪತಿ ರವಿವಾರ ಮ್ಯಾಂಚೆಸ್ಟರ್ ನಲ್ಲಿ ಎರಡೂ ದೇಶಗಳ ನಡುವೆ ನಡೆದ ವಿಶ್ವ ಕಪ್ ಪಂದ್ಯದ ಸಂದರ್ಭ ಸಾರಿದ್ದಾರೆ.

ಈ ದಂಪತಿ ಧರಿಸಿದ್ದ ಜರ್ಸಿ ಅರ್ಧ ಪಾಕಿಸ್ತಾನಿ  ಹಾಗೂ ಅರ್ಧ ಭಾರತೀಯ ತಂಡದ ಜರ್ಸಿಯನ್ನು ಹೋಲುತ್ತಿತ್ತು. ಪತಿ ಪಾಕಿಸ್ತಾನೀಯನಾಗಿದ್ದರೆ, ಪತ್ನಿ ಭಾರತೀಯಳಾಗಿದ್ದಾರೆ. ತಮ್ಮ ಈ ವಿಶಿಷ್ಟ ಜರ್ಸಿಯನ್ನು ಧರಿಸಿ ಪಂದ್ಯ ವೀಕ್ಷಿಸಲು ಬಂದ ಅವರು ಹಲವರ ಗಮನ ಸೆಳೆದರು.

''ನಾವು ಇಂದು ಶಾಂತಿಯನ್ನು ಬೆಂಬಲಿಸಿ ಬಂದಿದ್ದೇವೆ. ಆಕೆ ಭಾರತೀಯಳಾದರೆ ನಾನು ಪಾಕಿಸ್ತಾನಿ. ಆದುದರಿಂದ ನಾವು  ಎರಡೂ ದೇಶಗಳನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ನಾವೆಲ್ಲರೂ ಉತ್ತಮ ಕ್ರಿಕೆಟ್ ಬೆಂಬಲಿಸುತ್ತೇವೆ. ಇಂದು ಯಾರು ಉತ್ತಮವಾಗಿ ಆಡುತ್ತಾರೆಯೋ ಅವರು ಗೆಲ್ಲಬೇಕು. ಇಂದು ಕ್ರಿಕೆಟ್ ಗೆಲ್ಲಬೇಕು, ಅಷ್ಟೇ,'' ಎಂದು ಪಂದ್ಯದ ವೇಳೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News