‘ಕರಾವಳಿಯ ಅಡಿಕೆ, ಕಾಳುಮೆಣಸು ಬೆಳೆಗಾರರು ಬೆಳೆವಿಮೆ ಮಾಡಿ’

Update: 2019-06-18 12:44 GMT

ಉಡುಪಿ, ಜೂ.18: ಹವಾಮಾನ ಆಧಾರಿತ ಬೆಳೆವಿಮಾ ಯೋಜನೆ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ರೈತರಿಗೆ ಅನುಕೂಲಕರವಾದ ವಿಮಾ ಯೋಜನೆ. ಪ್ರಸ್ತುತ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಮಾತ್ರ ಈ ಯೋಜನೆಯನ್ನು ಕರಾವಳಿ ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಇದರ ವಿಮಾಕಂತು ತುಂಬಲು ಜೂ.30 ಕೊನೆದಿನವಾಗಿದೆ. ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ 1,28,000ರೂ. ವಿಮಾಮೊತ್ತನಿಗದಿಯಾಗಿದೆ. ಇದರ ಪ್ರೀಮಿಯಂ ಶೇ.32 ಅಂದರೆ ರೂ. 40,960 ಆಗಿದೆ. ಇದರಲ್ಲಿ ತಲಾ ಶೇ.13.5ರಂತೆ ರೂ.17,280ನ್ನು ಕೇಂದ್ರ ಸರಕಾರ ಹಾಗೂ ಅಷ್ಟೇ ಹಣವನ್ನು ರಾಜ್ಯ ಸರಕಾರ ಭರಿಸಲಿದ್ದು, ರೈತರು ಕೇವಲ ಶೇ.5 ಅಂದರೆ 6,400ರೂ.ವನ್ನು ಮಾತ್ರ ಪಾವತಿಸಬೇಕಾಗುತ್ತದೆ ಎಂದು ಭಾಕಿಸಂ ಹೇಳಿದೆ.

ಇದರ ವಿಮಾಕಂತು ತುಂಬಲು ಜೂ.30 ಕೊನೆದಿನವಾಗಿದೆ. ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ 1,28,000ರೂ. ವಿಮಾಮೊತ್ತನಿಗದಿಯಾಗಿದೆ. ಇದರ ಪ್ರೀಮಿಯಂ ಶೇ.32 ಅಂದರೆ ರೂ. 40,960 ಆಗಿದೆ. ಇದರಲ್ಲಿ ತಲಾ ಶೇ.13.5ರಂತೆ ರೂ.17,280ನ್ನು ಕೇಂದ್ರ ಸರಕಾರ ಹಾಗೂ ಅಷ್ಟೇ ಹಣವನ್ನು ರಾಜ್ಯ ಸರಕಾರ ರಿಸಲಿದ್ದು,ರೈತರುಕೇವಲಶೇ.5ಅಂದರೆ6,400ರೂ.ವನ್ನುಮಾತ್ರಪಾವತಿಸಬೇಕಾಗುತ್ತದೆಎಂದುಾಕಿಸಂ ಹೇಳಿದೆ. ನಿಗದಿತ ಅವಧಿಗಿಂತ ಹೆಚ್ಚಿನ ದಿನಗಳ ಕಾಲ ಅತೀ ಹೆಚ್ಚು ಮಳೆ ಅಥವಾ ಅತೀ ಕಡಿಮೆ ಮಳೆ ಬೀಳುವ ಸಂದರ್ಭಗಳಲ್ಲಿ ವಿಮಾ ಮೊತ್ತದ ಶೇ.20ಕ್ಕಿಂತ ಹೆಚ್ಚಿನ ಪರಿಹಾರ ದೊರಕುತ್ತದೆ. ಕಳೆದ ಎರಡು ವರ್ಷಗಳಲ್ಲಿ ಒಂದು ವರ್ಷ ಮಳೆ ಹೆಚ್ಚಾದ ಕಾರಣ ಪರಿಹಾರ ದೊರೆತರೆ, ಈ ಬಾರಿ ಮಳೆ ಕಡಿಮೆಯಾದ ಕಾರಣ ಪರಿಹಾರ ದೊರೆಯಲಿದೆ ಎಂದು ಹೇಳಿಕೆ ವಿವರಿಸಿದೆ.

ಆದರೆ ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ಮಾಹಿತಿಯಿಲ್ಲದ ಕಾರಣ ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ. ರೈತರು ತಾವು ಕೃಷಿ ಸಾಲ ಪಡೆದ ಸಹಕಾರಿ ಸಂಘ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಈ ಹವಾಮಾನ ಆದಾರಿತ ಬೆಳೆ ವಿಮೆಯನ್ನು ಮಾಡಿಸಬಹುದು. ಅವರು ವಿಮಾ ಕಂತಿನ ಜೊತೆಗೆ, ನಿಗದಿತ ಅರ್ಜಿ ನಮೂನೆಯನ್ನು ತುಂಬಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕದ ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರವನ್ನು ಸರ್ವೆ ನಂಬ್ರದೊಂದಿಗೆ ದಾಖಲಿಸಿ ನೀಡಬೇಕು. ಇದರ ಪ್ರಯೋಜನವನ್ನು ಜಿಲ್ಲೆಯಎಲ್ಲಾ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರು ಪಡೆಯಬೇಕು ಎಂದು ಉಡುಪಿ ಜಿಲ್ಲಾ ಸಮಿತಿಯ ಸಭೆಯಲ್ಲಿ ರೈತರಿಗೆ ಕರೆ ನೀಡಲಾಯಿತು.

ಅಕೇಶಿಯಾ ಗಿಡಕ್ಕೆ ವಿರೋಧ: ಜಿಲ್ಲಾಧ್ಯಕ್ಷ ನವೀನಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಈ ವಿಚಾರಗಳ ಜೊತೆಗೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಯಿಂದ ನೆಡುತ್ತಿರುವ ಅಕೇಶಿಯಾ ಗಿಡಗಳ ಬಗ್ಗೆಯೂ ಆಕ್ಷೇಪ ಸಲ್ಲಿಸಲು ತೀರ್ಮಾನಿಸಲಾಯಿತು. ಅಕೇಶಿಯಾ ಗಿಡಗಳನ್ನು ನೆಡದಂತೆ ಸರಕಾರವೇ ಆದೇಶ ಮಾಡಿದ್ದರೂ, ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಅದನ್ನು ಬೆಳೆಸಿ ನೆಡಲಾಗುತ್ತಿದೆ.ಇದರಿಂದ ಬೇರೆ ಹಣ್ಣು ಹಂಪಲು ಬಿಡುವ ಮರಗಳೂ ನಾಶವಾಗುವುದಲ್ಲದೇ, ಭೂಮಿಯ ಅಂತರ್ಜಲವೂ ಕುಸಿಯುತ್ತದೆ ಎಂದು ಭಾಕಿಸಂ ಹೇಳಿದೆ.

ಕೇವಲ ಇಲಾಖೆಗೆ ಮಾತ್ರ ಗಿಡ ಬೆಳೆಸುವುದು ಸುಲಭ ಹಾಗೂ ಪ್ರತೀ ವರ್ಷ ಗಾಳಿಯಿಂದ ಬೀಜ ಹಾರಿ ಸಾವಿರಾರು ಗಿಡಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಗಿಡ ನೆಡದೇ ಲೆಕ್ಕ ತೋರಿಸಲು ಸಾಧ್ಯ ಎಂಬ ಒಂದೇ ಕಾರಣಕ್ಕೆ ಅರಣ್ಯ ಇಲಾಖೆ ಇನ್ನೂ ಅಕೇಶಿಯಾ ಗಿಡಗಳನ್ನು ಬೆಳೆಸುತ್ತಿದೆ. ಜನರು ಅಕೇಶಿಯಾ ಗಿಡ ನೆಡುವ ಇಲಾಖೆಯ ಅಧಿಕಾರಿಗಳನ್ನು ವಿರೋಧಿಸಬೇಕು. ಅಲ್ಲದೇ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗೆ ಈ ಬಗ್ಗೆ ಮನವಿ ಕೊಡುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಿಲ್ಲಾ ಉಪಾಧ್ಯಕ್ಷರಾದ ರಾಮಚಂದ್ರ ಅಲ್ಸೆ, ಶ್ರೀನಿವಾಸ ಭಟ್, ಪ್ರಮುಖರಾದ ಬಿ.ವಿ. ಪೂಜಾರಿ, ಸದಾನಂದ ಶೆಟ್ಟಿ, ಕೆ.ಪಿ.ಭಂಡಾರಿ, ಸೀತಾರಾಮ ಗಾಣಿಗ, ಪಾಂಡುರಂಗ ಹೆಗ್ಡೆ, ರಾಜೀವ ಶೆಟ್ಟಿ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News