ಎಫ್‌ಸಿಆರ್‌ಎ ಉಲ್ಲಂಘನೆ ಆರೋಪ: ಸಿಬಿಐನಿಂದ ‘ಲಾಯರ್ಸ್ ಕಲೆಕ್ಟಿವ್’ ವಿರುದ್ಧ ಕ್ರಿಮಿನಲ್ ಪ್ರಕರಣ

Update: 2019-06-18 14:12 GMT

ಹೊಸದಿಲ್ಲಿ,ಜೂ.18: ಕೇಂದ್ರ ಗೃಹಸಚಿವಾಲಯದ ದೂರಿನ ಮೇರೆಗೆ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯ ನಿಯಮಗಳ ಉಲ್ಲಂಘನೆಗಳ ಆರೋಪದಲ್ಲಿ ದಿಲ್ಲಿಯ ಎನ್‌ಜಿಒ ಲಾಯರ್ಸ್ ಕಲೆಕ್ಟಿವ್ ವಿರುದ್ಧ ಸಿಬಿಐ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದೆ. ದಿಲ್ಲಿಯ ವಕೀಲರ ಗುಂಪೊಂದು 1981ರಲ್ಲಿ ಈ ಎನ್‌ಜಿಒ ಅನ್ನು ಸ್ಥಾಪಿಸಿತ್ತು.

ಎಫ್‌ಐಆರ್‌ನಲ್ಲಿ ಸಂಸ್ಥೆಯ ಟ್ರಸ್ಟಿ ಹಾಗೂ ನಿರ್ದೇಶಕ ಆನಂದ ಗ್ರೋವರ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಗ್ರೋವರ್ ಅವರು ಸರ್ವೋಚ್ಚ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ಪತಿಯಾಗಿದ್ದಾರೆ.

ಐಪಿಸಿಯ ಫೋರ್ಜರಿ,ವಂಚನೆ ಮತ್ತು ಕ್ರಿಮಿನಲ್ ಒಳಸಂಚು ಕಲಮ್‌ಗಳಡಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸಂಸ್ಥೆಯ ಅನಾಮಿಕ ಪದಾಧಿಕಾರಿಗಳು,ಅಪರಿಚಿತ ಖಾಸಗಿ ವ್ಯಕ್ತಿಗಳು ಮತ್ತು ಸರಕಾರಿ ನೌಕರರನ್ನೂ ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ. ಫೆರಾದ ಕಲಮ್‌ಗಳನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News