ಯುನಿವೆಫ್: ಮೌಲಾನಾ ಅಬುಲ್ ಕಲಾಂ ಅಝಾದ್, ಅಲ್ಲಾಮಾ ಇಕ್ಬಾಲ್ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2019-06-19 06:06 GMT

ಮಂಗಳೂರು: ಯುನಿವೆಫ್ ಶೈಕ್ಷಣಿಕ ಘಟಕದ ವತಿಯಿಂದ 2018-19 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು  ದ್ವಿತೀಯ  ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಹಿಂದುಳಿದಿರುವ ಬಡ ಮುಸ್ಲಿಮ್  ವಿದ್ಯಾರ್ಥಿಗಳಿಂದ ಮೌಲಾನಾ ಅಬುಲ್ ಕಲಾಮ್ ಆಝಾದ್, ಮತ್ತು ಸರ್ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎಸ್ಸೆಸ್ಸೆಲ್ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಓರ್ವ ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿಗೆ ಮೌಲಾನಾ ಅಬುಲ್ ಕಲಾಮ್ ಆಝಾದ್ ಪ್ರಶಸ್ತಿ
ಮತ್ತು ದ್ವಿತೀಯ ಪಿ.ಯು.ಸಿ.ಯ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರ್ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿ ಯನ್ನು ನೀಡಲಾಗುವುದು.

ಪ್ರಶಸ್ತಿಯು ತಲಾ 5000 ರೂ. ನಗದು ಮತ್ತು ಪ್ರಮಾಣ ಪತ್ರವನ್ನೊಳಗೊಂಡಿರುತ್ತದೆ.

2018/19 ರ ಪ್ರಸಕ್ತ ಸಾಲಿನಲ್ಲಿ 500 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.  ಆರ್ಥಿಕವಾಗಿ ಹಿಂದುಳಿದವರಾಗಿರಬೇಕು. ಕಲಿಕೆಯನ್ನು ಮುಂದುವರಿಸಿರಬೇಕು. ಅರ್ಹ ವಿದ್ಯಾರ್ಥಿ , ವಿದ್ಯಾರ್ಥಿನಿಯರು ತಮ್ಮ ಅಂಕ ಪಟ್ಟಿಯ ಪ್ರತಿ, ಫೋಟೋ, ಈಗ ಕಲಿಯುತ್ತಿರುವ ಕಾಲೇಜಿನ ದೃಢೀಕರಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ತಮ್ಮ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. 

ಸಂಚಾಲಕರು, ಯುನಿವೆಫ್ ಶೈಕ್ಷಣಿಕ ಘಟಕ, ಒಂದನೇ ಮಹಡಿ, ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ, ಫಳ್ನೀರ್, ಮಂಗಳೂರು - 575 002 ಅರ್ಜಿ ಸಲ್ಲಿಸಲು ಕೊನೆಯ ಜು. 15. ಸ್ವೀಕೃತವಾಗಿರುವ ಅರ್ಜಿಗಳಲ್ಲಿ ಕುಟುಂಬದ ಆದಾಯದ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಯು. ಕೆ. ಖಾಲಿದ್, ಸಂಚಾಲಕರು,  ಯುನಿವೆಫ್ ಶೈಕ್ಷಣಿಕ ಘಟಕ, ಮೊಬೈಲ್ ಸಂಖ್ಯೆ: 98451 99931 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News