ಕುದ್ಲೂರು: ಜೂ.20 ರಂದು ನವೀಕೃತ ಮಸೀದಿ ಉದ್ಘಾಟನೆ

Update: 2019-06-19 11:38 GMT

ಉಪ್ಪಿನಂಗಡಿ,ಜೂ,19: ಇಲ್ಲಿನ ಕುದ್ಲೂರು ಎಂಬಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಸಾರಥ್ಯದಲ್ಲಿ ನಿರ್ಮಾಣಗೊಂಡ ನವೀಕೃತ ಬದ್ರ್ ಜುಮ್ಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮ ಜೂ.20 ರಂದು ಮದ್ಯಾಹ್ನ ನಡೆಯಲಿದೆ.

ಕಾರ್ಯಕ್ರಮದಲ್ಲಿ ಖುರ್ರತುಸ್ಸಾದಾತ್ ಕೂರತ್ ತಂಙಳ್, ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಹಾಗೂ ಇನ್ನಿತರ ವಿದ್ವಾಂಸರು, ನಾಯಕರು ಹಾಗೂ ಊರಿನ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಬದ್ರ್ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಇಬ್ರಾಹಿಂ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News