ಸುಳ್ಯದಲ್ಲಿ 'ನ್ಯೂಬಿ ಫ್ರೀ ಸ್ಕೂಲ್' ಉದ್ಘಾಟನೆ

Update: 2019-06-19 11:51 GMT

ಸುಳ್ಯ, ಜೂ.19: ಧಾರ್ಮಿಕ ತಳಹದಿಯ ಸಂಸ್ಕಾರದಿಂದ ಕೂಡಿದ ಆಧುನಿಕ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ.ಮುಸ್ತಫ ಹೇಳಿದರು. 

ಸುಳ್ಯದ ಪರಿವಾರಕಾನದ ‘ಗ್ರಾಂಡ್ ಪರಿವಾರ್’ ಕಾಂಪ್ಲೆಕ್ಸ್ ನಲ್ಲಿ ಆಧುನಿಕ ಪರಿಕಲ್ಪನೆಯ ನ್ಯೂಬಿ ಪ್ರಿ ಸ್ಕೂಲ್‍ನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಏರ್ಪಡಿಸಲಾದ ‘ಎಜು ಎಕ್ಸ್ ಪೋ 2019’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಾಲಾ ಪ್ರಾರಂಭೋತ್ಸವ ‘ಇಖ್ರಾ ಡೇ’ಗೆ ಅನ್ಸಾರಿಯಾ ಖತೀಬ್ ಉಮ್ಮರ್ ಮುಸ್ಲಿಯಾರ್ ಮರ್ದಾಳ ಚಾಲನೆ ನೀಡಿದರು. ಸೆಯದ್ ತಾಹಿರ್ ಸಅದಿ ತಂಙಳ್‍ ಪ್ರಾರ್ಥನೆಗೈದರು. ನೌಫಾಲ್ ಬೆಳ್ತಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಯುವ ನ್ಯಾಯವಾದಿ ಶಾಕಿರ್, ನಗರ ಪಂಚಾಯತ್ ಸದಸ್ಯರಾದ ಬಿ. ಉಮ್ಮರ್, ಶರೀಫ್ ಕಂಠಿ, ಸುಳ್ಯದ ಸಮದ್ ಹಾಜಿ ಖಲೀದಿಯಾ ಮೊಗರ್ಪಣೆ, ಹಾಜಿ ಪಿ.ಎ.ಮಹಮ್ಮದ್, ಹಾಜಿ ಐ.ಇಸ್ಮಾಯಿಲ್, ಹಾಜಿ ಅಬ್ದುಲ್ ಮಜೀದ್ ಜನತ, ಹಸೈನಾರ್ ಹಾಜಿ ಗೋರಡ್ಕ, ಹಮೀದ್ ಬೀಜಕೊಚ್ಚಿ, ಅಬ್ದುರ್ರಹ್ಮಾನ್ ಮೊಗರ್ಪಣೆ, ಎಂ.ಕೆ.ಅಬ್ದುಲ್ ಲತೀಫ್, ಇಬ್ರಾಹಿಂ ಕತ್ತರ್ ಮಂಡೆಕೋಲು ಸೇರಿ ಅನೇಕರು ಹಾಜರಿದ್ದರು. ರಾಫಿ ಸ್ವಾಗತಿಸಿ, ಶಫೀಕ್ ಈಶ್ವರಮಂಗಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News