ಜಪಾನ್‌ನಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ ವಾಪಸ್

Update: 2019-06-19 15:53 GMT

ಟೋಕಿಯೊ, ಜೂ. 19: ಜಪಾನ್‌ನಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಬೆನ್ನಿಗೇ ಅಧಿಕಾರಿಗಳು ಸುನಾಮಿ ಎಚ್ಚರಿಕೆ ಹೊರಡಿಸಿದರು. ಬೆರಳೆಣಿಕೆಯಷ್ಟು ಜನರು ಲಘುವಾಗಿ ಗಾಯಗೊಂಡ ಬಳಿಕ ಸುನಾಮಿ ಎಚ್ಚರಿಕೆಯನ್ನು ವಾಪಸ್ ಪಡೆದುಕೊಳ್ಳಲಾಯಿತು.

ಒಂದು ಮೀಟರ್ ಎತ್ತರದ ಅಲೆಗಳು ಟೋಕಿಯೊದ ಉತ್ತರದಲ್ಲಿ ಜಪಾನ್ ಸಮುದ್ರದ ಕರಾವಳಿಗೆ ಅಪ್ಪಳಿಸಬಹುದು ಎಂಬುದಾಗಿ ಎಚ್ಚರಿಕೆ ಹೊರಡಿಸಲಾಗಿತ್ತು. ಆದರೆ, ಕೇವಲ 10 ಸೆಂಟಿಮೀಟರ್ ಎತ್ತರದ ಸಣ್ಣ ಅಲೆಗಳು ಕಂಡುಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News