ವಸತಿ ಬಿಕ್ಕಟ್ಟು ನಿಭಾಯಿಸಲು 1 ಬಿಲಿಯ ಡಾಲರ್

Update: 2019-06-19 15:55 GMT

ಸಾನ್‌ಫ್ರಾನ್ಸಿಸ್ಕೊ, ಜೂ. 19: ತನ್ನ ಪ್ರಧಾನ ಕಚೇರಿ ಇರುವ ಕ್ಯಾಲಿಫೋರ್ನಿಯ ಮತ್ತು ಸಿಲಿಕಾನ್ ವ್ಯಾಲಿಯನ್ನೊಳಗೊಂಡ ಪ್ರದೇಶವು ಎದುರಿಸುತ್ತಿರುವ ತೀವ್ರ ವಸತಿ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಒಂದು ಬಿಲಿಯ ಡಾಲರ್ (ಸುಮಾರು 7,000 ಕೋಟಿ ರೂಪಾಯಿ)ಗೂ ಅಧಿಕ ಮೊತ್ತವನ್ನು ನೀಡುವುದಾಗಿ ಗೂಗಲ್ ಮಂಗಳವಾರ ಭರವಸೆ ನಿಡಿದೆ.

ತಂತ್ರಜ್ಞಾನ ಕಂಪೆನಿಗಳಿಂದ ಸಮೃದ್ಧವಾಗಿರುವ ಪ್ರದೇಶದಲ್ಲಿ ಗೂಗಲ್ ‘ಉತ್ತಮ ನೆರೆಕರೆ’ಯಾಗಲು ಬಯಸುತ್ತದೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಘೋಷಿಸಿದ್ದಾರೆ.

ಈ ವಲಯವು ಅತಿ ಹೆಚ್ಚು ಸಂಬಳ ಪಡೆಯುವ ಸಾವಿರಾರು ತಂತ್ರಜ್ಞಾನ ಕೆಲಸಗಾರರನ್ನು ಆಕರ್ಷಿಸುತ್ತದೆ. ಇದರಿಂದಾಗಿ ಇಲ್ಲಿನ ಮನೆಗಳಿಗೆ ವಿಪರೀತ ಬೇಡಿಕೆಯಿದೆ. ವಿಪರೀತ ಬೇಡಿಕೆಯಿಂದಾಗಿ ಮನೆಗಳ ಬೆಲೆಗಳು ಗಗನಕ್ಕೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News