ಎಂಎಚ್17 ವಿಮಾನ ಪತನ: ನಾಲ್ವರ ವಿರುದ್ಧ ಕೊಲೆ ಆರೋಪ

Update: 2019-06-19 15:59 GMT

ನಿವಸೇನ್ (ನೆದರ್‌ಲ್ಯಾಂಡ್), ಜೂ. 19: ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್-17 ವಿಮಾನವನ್ನು ಹೊಡೆದುರುಳಿಸಿದ ಪ್ರಕರಣದ ತನಿಖೆ ನಡೆಸಿರುವ ಅಂತರ್‌ರಾಷ್ಟ್ರೀಯ ತನಿಖಾಧಿಕಾರಿಗಳು ಬುಧವಾರ ನಾಲ್ಕು ಮಂದಿಯ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ.

2014ರಲ್ಲಿ ಬಂಡುಕೋರ ನಿಯಂತ್ರಣದ ಪೂರ್ವ ಯುಕ್ರೇನ್‌ನ ಆಕಾಶದಲ್ಲಿ ವಿಮಾನವನ್ನು ಹೊಡೆದುರುಳಿಸಲಾಗಿದ್ದು, ವಿಮಾನದಲ್ಲಿದ್ದ ಎಲ್ಲ 298 ಮಂದಿ ಮೃತಪಟ್ಟಿದ್ದಾರೆ.

ರಶ್ಯದ ಪ್ರಜೆಗಳಾದ ಇಗರ್ ಗಿರ್ಕಿನ್, ಸರ್ಗಿ ಡುಬಿನ್‌ಸ್ಕಿಯ್ ಮತ್ತು ಒಲೆಗ್ ಪುಲಟೊವ್ ಮತ್ತು ಯುಕ್ರೇನ್ ಪ್ರಜೆ ಲಿಯೊನಿಡ್ ಖರ್ಚೆಂಕೊರನ್ನು ವಿಚಾರಣೆಗೆ ಗುರಿಪಡಿಸುವುದಾಗಿ ನೆದರ್‌ಲ್ಯಾಂಡ್ ನೇತೃತ್ವದ ತಂಡ ತಿಳಿಸಿದೆ.

ಎಂಎಚ್-17 ವಿಮಾನ ಪತನದಲ್ಲಿ ತನ್ನ ಪಾತ್ರವಿಲ್ಲ ಎಂಬುದಾಗಿ ರಶ್ಯ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ.

 ಆರೋಪಿಗಳ ವಿಚಾರಣೆಯು 2020ರ ಮಾರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಆದರೆ, ತನ್ನ ಪ್ರಜೆಗಳನ್ನು ರಶ್ಯ ವಿಚಾರಣೆಗಾಗಿ ಗಡಿಪಾರು ಮಾಡಲು ನಿರಾಕರಿಸಿರುವುದರಿಂದ ರಶ್ಯದ ಆರೋಪಿಗಳ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News