ಮರು ಆಯ್ಕೆಗೆ ಚುನಾವಣಾ ಅಭಿಯಾನ ಆರಂಭಿಸಿದ ಟ್ರಂಪ್

Update: 2019-06-19 16:16 GMT

ಒರ್ಲಾಂಡೊ (ಅಮೆರಿಕ), ಜೂ. 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಕನಿಷ್ಠ 20,000 ಬೆಂಬಲಿಗರ ಸಮ್ಮುಖದಲ್ಲಿ ರಾಷ್ಟ್ರೀಯವಾದಿ ಘೋಷಣೆಗಳೊಂದಿಗೆ ತನ್ನ 2020ರ ಚುನಾವಣಾ ಅಭಿಯಾನವನ್ನು ಆರಂಭಿಸಿದ್ದಾರೆ.

ಅಮೆರಿಕದ ಆರ್ಥಿಕತೆಗೆ ಜಗತ್ತು ಮತ್ಸರ ಪಡುತ್ತಿದೆ ಎಂದು ಹೇಳಿದ ಅವರು, ಪ್ರತಿಪಕ್ಷ ಡೆಮಾಕ್ರಟಿಗರು ದೇಶವನ್ನು ‘ನಾಶಪಡಿಸಲು’ ಬಯಸುತ್ತಿದ್ದಾರೆ ಎಂಬುದಾಗಿ ಎಚ್ಚರಿಸಿದರು.

ಫ್ಲೋರಿಡ ರಾಜ್ಯದ ಒರ್ಲಾಂಡೊದಲ್ಲಿ ಕಿಕ್ಕಿರಿದು ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘‘ನಾವು ಒಮ್ಮೆ ಮಾಡಿ ತೋರಿಸಿದ್ದೇವೆ ಹಾಗೂ ಅದನ್ನು ಇನ್ನೊಮ್ಮೆ ಮಾಡಲಿದ್ದೇವೆ. ಹಾಗೂ ಈ ಬಾರಿ ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸಲಿದ್ದೇವೆ’’ ಎಂದು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಟ್ರಂಪ್ ಬೆಂಬಲಿಗರು ಮುನ್ನಾ ದಿನ ರಾತ್ರಿಯಿಂದಲೇ ಒರ್ಲಾಂಡೊ ನಗರದ ಕಾಲುದಾರಿಗಳಲ್ಲಿ ಸರತಿ ಸಾಲುಗಳಲ್ಲಿ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News