ಈಜಿಪ್ಟ್ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿ ದಫನ

Update: 2019-06-19 16:21 GMT

ಕೈರೋ, ಜೂ. 19: ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಈಜಿಪ್ಟ್‌ನ ಮೊದಲ ಅಧ್ಯಕ್ಷ ಮುಹಮ್ಮದ್ ಮುರ್ಸಿಯನ್ನು ಮಂಗಳವಾರ ರಾಜಧಾನಿ ಕೈರೋದಲ್ಲಿ ದಫನ ಮಾಡಲಾಯಿತು.

ಈ ನಡುವೆ, ಕೈರೋದ ನ್ಯಾಯಾಲಯ ಕೋಣೆಯಲ್ಲಿ ಕುಸಿದು ಬಿದ್ದು ಸಂಭವಿಸಿದ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಎಂಬ ವಿಶ್ವಸಂಸ್ಥೆ ಬೆಂಬಲಿತ ಕರೆ ಪ್ರಬಲವಾಗಿದೆ.

ಸುಮಾರು 10 ಕುಟುಂಬ ಸದಸ್ಯರು ಹಾಗೂ ಅವರ ಕೆಲವು ನಂಬಿಗಸ್ತರು ದಫನ ಸಂದರ್ಭದಲ್ಲಿ ಹಾಜರಿದ್ದರು ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದರು.

67 ವರ್ಷದ ಮುರ್ಸಿ 2013ರಲ್ಲಿ ಸೇನೆಯಿಂದ ಪದಚ್ಯುತಗೊಂಡ ಬಳಿಕ ಜೈಲಿನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News