ನಿಷ್ಪಕ್ಷ ರೀತಿಯಲ್ಲಿ ಸದನದ ಕಲಾಪ: ಸ್ಪೀಕರ್ ಓಂ ಬಿರ್ಲಾ

Update: 2019-06-19 17:48 GMT

ಹೊಸದಿಲ್ಲಿ, ಜೂ. 19: ಸದನದ ಕಲಾಪವನ್ನು ನಿಷ್ಪಕ್ಷ ರೀತಿಯಲ್ಲಿ ನಡೆಸಲಾಗುವುದು ಎಂದು ಲೋಕಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಆಗಿರುವ ಓಂ ಬಿರ್ಲಾ ಬುಧವಾರ ಹೇಳಿದ್ದಾರೆ. ಸ್ಪೀಕರ್ ಆಗಿ ಸರ್ವಸಮ್ಮತವಾಗಿ ಆಯ್ಕೆ ಆದ ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಯಮ, ನಿಬಂಧನೆಗಳಿಗೆ ಅನುಗುಣವಾಗಿ ತಾನು ಕಲಾಪದಲ್ಲಿ ಉಪಸ್ಥಿತಿ ಇರಲಿದ್ದೇನೆ ಎಂದರು.

ಸದನದಲ್ಲಿ ಪಕ್ಷಗಳ ಸಾಮರ್ಥ್ಯ ಪರಿಗಣಿಸದೆ ಸದಸ್ಯರ ಹಿತಾಸಾಕ್ತಿ ರಕ್ಷಿಸಲಿದ್ದೇನೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಸುಸೂತ್ರವಾಗಿ ಸರಕಾರ ನಡೆಸುತ್ತಿರುವುದನ್ನು ಪ್ರಶಂಸಿಸಿದ ಬಿರ್ಲಾ, ಸದನದಲ್ಲಿ ಸರಕಾರ ಹೆಚ್ಚು ಜವಾಬ್ದಾರಿಯುತ ಹಾಗೂ ಉತ್ತರದಾಯಿಯಾಗಿರಬೇಕು ಎಂದರು.

 ಪ್ರತಿಯೊಬ್ಬರು ಕೂಡ ಆಲಿಸಬೇಕು ಹಾಗೂ ಸರಕಾರ ಪ್ರತಿಯೋರ್ವನಿಗೂ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಹೇಳಿದರು. ಸದನ ಸುಸೂತ್ರವಾಗಿ ನಡೆಯಲು ಎಲ್ಲ ಸದಸ್ಯರ ಸಹಕಾರ ಕೋರಿದ ಬಿರ್ಲಾ, ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳ ಬಗ್ಗೆ ಸದಸ್ಯರು ಪ್ರಶ್ನಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News