ಮೂವರು ಲೈಂಗಿಕ ಕಾರ್ಯಕರ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ:ಏಳು ಜನರ ಬಂಧನ

Update: 2019-06-20 14:51 GMT

ನೊಯ್ಡ(ಉ.ಪ್ರ),ಜೂ.20: ಇಲ್ಲಿಯ ತೋಟದ ಮನೆಯೊಂದರಲ್ಲಿ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಏಳು ಜನರನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದು,ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರಾಗಿರುವ ಮೂವರು ಮಹಿಳೆಯರು ಮಂಗಳವಾರ ರಾತ್ರಿ 11:30ರ ಸುಮಾರಿಗೆ ದಿಲ್ಲಿಯ ಲಾಜಪತ್ ನಗರ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಟ್ಯಾಕ್ಸಿಯಲ್ಲಿ ಬಂದಿದ್ದ ಇಬ್ಬರು ಪ್ರತಿ ಗ್ರಾಹಕನಿಗೆ 3,000 ರೂ.ಗಳಂತೆ ವ್ಯವಹಾರ ಕುದುರಿಸಿದ್ದರು. ಸೆಕ್ಟರ್ 18ರಲ್ಲಿ ಇಳಿಸುವುದಾಗಿ ತಿಳಿಸಿ ಮಹಿಳೆಯ ರನ್ನು ಕಾರಿಗೆ ಹತ್ತಿಸಿಕೊಂಡಿದ್ದ ಅವರು ಸೆಕ್ಟರ್ 135ರಲ್ಲಿರುವ ತೋಟದ ಮನೆಯೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರ ಏಳು ಸ್ನೇಹಿತರೂ ಬಂದಿದ್ದು,ಮಹಿಳೆಯರು ಪ್ರತಿಭಟಿಸಿದರೂ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಮತ್ತು ಮುಂಗಡವಾಗಿ ನೀಡಿದ್ದ ಹಣವನ್ನೂ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಎಸ್‌ಎಸ್‌ಪಿ ವೈಭವ ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಬೆಳಗಿನ ಜಾವ ಆರೋಪಿಗಳಲ್ಲೋರ್ವ ಮಹಿಳೆಯರನ್ನು ಬೈಕ್‌ನಲ್ಲಿ ಕರೆತಂದು ಪುಷ್ತಾ ಸಮೀಪ ಬಿಟ್ಟು ಹೋಗಿದ್ದ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News