ಮಹಾರಾಷ್ಟ್ರ: ಎರಡು ಲಘು ಭೂಕಂಪನ

Update: 2019-06-20 16:09 GMT

ಮುಂಬೈ, ಜೂ.20: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಲಘು ತೀವ್ರತೆಯ ಎರಡು ಭೂಕಂಪನ ಸಂಭವಿಸಿದ್ದು ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಕ್ಟರ್ ಮಾಪಕದಲ್ಲಿ 4.8 ಮತ್ತು 3 ಪ್ರಮಾಣದ ಲಘು ಭೂಕಂಪ ಗುರುವಾರ ಬೆಳಿಗ್ಗೆ ಸುಮಾರು 7:47 ಗಂಟೆಗೆ ಸಂಭವಿಸಿದೆ. ಭೂಮಿ ನಡುಗಿದಾಗ ಜನರು ಆತಂಕಿತರಾಗಿ ಮನೆಯಿಂದ ಹೊರಗೋಡಿ ಬಂದರು. ಎರಡೂ ಭೂಕಂಪಗಳ ಕೇಂದ್ರ ಬಿಂದು ಅನುಕ್ರಮವಾಗಿ 5 ಮತ್ತು 10 ಕಿ.ಮೀ. ನೆಲದಾಳದಲ್ಲಿ ಕಂಡು ಬಂದಿದೆ. ಭೂಕಂಪನ ಪೀಡಿತ ವಲಯದಲ್ಲಿರುವ ಪಶ್ಚಿಮ ಮಹಾರಾಷ್ಟ್ರದ ಕೋಯ್ನಿ ಪ್ರದೇಶ ವ್ಯಾಪ್ತಿಯಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News