ಎಲ್ಲಿಯವರೆಗೆ ನೀವು ಮೂಕ ಪ್ರೇಕ್ಷಕರಾಗಿ ಇರುತ್ತೀರಿ: ಐಪಿಎಸ್ ಅಸೋಸಿಯೇಶನ್ ಗೆ ಶ್ವೇತಾ ಸಂಜೀವ್ ಭಟ್ ಪ್ರಶ್ನೆ

Update: 2019-06-20 17:51 GMT

30 ವರ್ಷಗಳಷ್ಟು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಗುಜರಾತ್‌ನ ಜಾಮ್‌ ನಗರದ ಸೆಶನ್ಸ್ ನ್ಯಾಯಾಲಯ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 1990ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ನಡೆದ ಹಿಂಸಾಚಾರ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಈ ಬಗ್ಗೆ ಸಂಜೀವ್ ಭಟ್ ಪತ್ನಿ ಶ್ವೇತಾ ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿನಂತಿದೆ…

“ಮಾಡದ ಅಪರಾಧಕ್ಕಾಗಿ ಇಂದು ಸೆಶನ್ ನ್ಯಾಯಾಲಯವು ಸಂಜೀವ್ ರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸಂಜೀವ್ ಗೆ ಬೆಂಬಲವಾಗಿ ನಿಂತ ನಿಮಗೆಲ್ಲರಿಗೂ, ನಿಮ್ಮ ಬೆಂಬಲದ ಮಾತುಗಳು ಸಾಂತ್ವನ ನೀಡುವಂತದ್ದು ಮತ್ತು ಪ್ರೋತ್ಸಾಹದಾಯಕವಾದದ್ದು. ಆದರೆ ಕ್ರಿಯೆಯಿಲ್ಲದೆ ಬರಿಯ ಮಾತುಗಳಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ನೀವು ಸುಮ್ಮನಿದ್ದು ದೇಶಕ್ಕಾಗಿ ಮತ್ತು ತನ್ನ ಜನರಿಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ ವ್ಯಕ್ತಿಗೆ ಅನ್ಯಾಯವಾದರೆ ನಿಮ್ಮ ಬೆಂಬಲವು ವ್ಯರ್ಥವಾಗಲಿದೆ”.

“ಇದು ಐಪಿಎಸ್ ಅಸೋಸಿಯೇಶನ್ ಗಾಗಿ-

ನೈಜ ಐಪಿಎಸ್ ಅಧಿಕಾರಿಯಾದದ್ದಕ್ಕಾಗಿ ಇಂದು ನಿಮ್ಮವನೇ ಆದ ವ್ಯಕ್ತಿಯೊಬ್ಬರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಾಗಿದೆ. ನೀವು ಅವರೊಂದಿಗೆ ನಿಲ್ಲಲಿಲ್ಲ… ನೀವು ಅವರನ್ನು ರಕ್ಷಿಸಲಿಲ್ಲ… ಅವರು (ಸಂಜೀವ್) ಮೋಸದ ಸರಕಾರದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿದ್ದರು. ಈಗ ಇರುವ ಪ್ರಶ್ನೆಯೆಂದರೆ ಯಾವ ಕೊನೆಯವರೆಗೆ ನೀವು ಮೂಕ ಪ್ರೇಕ್ಷಕರಾಗಿ ಇರುತ್ತೀರಿ ಎನ್ನುವುದು.. ನಮ್ಮ ದೇಶವು ಭಯಾನಕ ಕಗ್ಗತ್ತಿಲೆನೆಡೆಗೆ ಸಾಗುತ್ತಿದೆ. ನಾವು ನಮ್ಮ ಕೊನೆಯ ಉಸಿರಿರುವವರೆಗೂ ಹೋರಾಟ ನಡೆಸುತ್ತೇವೆ. ನಾವು ಏಕಾಂಗಿಯಾಗಿ ಹೋರಾಡುತ್ತೇವೆಯೇ? ಅಥವಾ ತಮಗಾಗಿ ಹೋರಾಟ ನಡೆಸಿದ ವ್ಯಕ್ತಿಗಾಗಿ ಈ ಸಾರ್ವಭೌಮ ಪ್ರಜಾಪ್ರಭುತ್ವದ ಜನರು ಹೋರಾಟ ನಡೆಸುತ್ತಾರೆಯೇ ಎನ್ನುವುದನ್ನು ಮಾತ್ರ ನೋಡುವುದು ಬಾಕಿಯುಳಿದಿದೆ.

ಭಾರತ, ಇದು ಎಚ್ಚರಗೊಳ್ಳಬೇಕಾದ ಸಮಯ, ಇಂದು ನಾವು, ನಾವು ನೀವೂ ಆಗಿರಬಹುದು…”

ಶ್ವೇತಾ ಸಂಜೀವ್ ಭಟ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News