ಮುಶ್ಫಿಕುರ್ರಹೀಂ ಶತಕ ವ್ಯರ್ಥ: ಆಸ್ಟ್ರೇಲಿಯ ಜಯಭೇರಿ

Update: 2019-06-20 18:27 GMT

  ನಾಟಿಂಗ್‌ಹ್ಯಾಮ್, ಜೂ.20: ಮುಶ್ಫಿಕುರ್ರಹೀಂ(ಔಟಾಗದೆ 102)ಶತಕ, ಮಹ್ಮೂದುಲ್ಲಾ(69) ಹಾಗೂ ತಮೀಮ್ ಇಕ್ಬಾಲ್(62) ಅರ್ಧಶತಕದ ಕೊಡುಗೆ ನೆರವಿನಿಂದ ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಬಾಂಗ್ಲಾದೇಶ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ 48 ರನ್‌ಗಳಿಂದ ಸೋಲುಂಡಿತು.

ಗುರುವಾರ ಇಲ್ಲಿ ನಡೆದ ವಿಶ್ವಕಪ್‌ನ 26ನೇ ಪಂದ್ಯದ ಗೆಲುವಿಗೆ 382 ರನ್ ಕಠಿಣ ಗುರಿ ಪಡೆದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟಿಗೆ 333 ರನ್ ಗಳಿಸಿದೆ.

ಸೌಮ್ಯ ಸರ್ಕಾರ್(10)ವಿಕೆಟನ್ನು ಬೇಗನೆ ಕಳೆದುಕೊಂಡ ಬಾಂಗ್ಲಾಕ್ಕೆ ಇಕ್ಬಾಲ್ ಹಾಗೂ ಶಾಕಿಬ್ ಅಲ್ ಹಸನ್(41)2ನೇ ವಿಕೆಟ್‌ಗೆ 79 ರನ್ ಸೇರಿಸಿ ಆಸರೆಯಾದರು. ಬಾಂಗ್ಲಾ 175ರನ್‌ಗೆ 4 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಮುಶ್ಫಿಕುರ್ರಹೀಂ ಹಾಗೂ ಮಹ್ಮೂದುಲ್ಲಾ(69 ರನ್, 50 ಎಸೆತ, 5 ಬೌಂ.,3 ಸಿ.)5ನೇ ವಿಕೆಟ್‌ಗೆ 127 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಇಕ್ಬಾಲ್ 65 ಎಸೆತಗಳಲ್ಲಿ 47ನೇ ಅರ್ಧಶತಕ ಸಿಡಿಸಿದರೆ, ಮಹ್ಮೂದುಲ್ಲಾ 41 ಎಸೆತಗಳಲ್ಲಿ 21ನೇ ಅರ್ಧಶತಕ ಬಾರಿಸಿದರು.

ಮುಶ್ಫೀಕುರ್ರಹೀಂ 95 ಎಸೆತಗಳಲ್ಲಿ 7ನೇ ಶತಕ ಪೂರೈಸಿದರು.

  ಇದಕ್ಕೂ ಮೊದಲು ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ(166, 147 ಎಸೆತ), ಉಸ್ಮಾನ್ ಖ್ವಾಜಾ(89, 72 ಎಸೆತ) ಹಾಗೂ ಆ್ಯರೊನ್ ಫಿಂಚ್(53, 51 ಎಸೆತ) ಅರ್ಧಶತಕದ ಕೊಡುಗೆಯ ಸಹಾಯದಿಂದ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 381 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News