ಮಣಿಪಾಲ ಕೆಎಂಸಿ ಆಸ್ಪತ್ರೆ ಆವರಣದಲ್ಲಿ ಉರುಳಿ ಬಿದ್ದ ಮರ: ನಾಲ್ಕು ಕಾರು ಜಖಂ

Update: 2019-06-21 11:11 GMT

ಮಣಿಪಾಲ, ಜೂ.21: ಮಣಿಪಾಲ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಎದುರಿನಲ್ಲಿರುವ ಬೃಹತ್ ಮರವೊಂದು ಬಿದ್ದು ನಾಲ್ಕು ಕಾರುಗಳು ಜಖಂ ಆಗಿರುವ ಘಟನೆ ಇಂದು ಅಪರಾಹ್ನ 2ರ ಸುಮಾರಿಗೆ ನಡೆದಿದೆ.

ತುರ್ತು ಚಿಕಿತ್ಸಾ ಘಟಕದ ಎಡ ಬದಿಯ ಪಾರ್ಕಿಂಗ್ ಪ್ರದೇಶದಲ್ಲಿರುವ ಹಳೆಯದಾದ ಮೇ ಫ್ಲವರ್ ಮರ ಬುಡ ಸಮೇತವಾಗಿ ಧರೆಗೆ ಉರುಳಿ ಬಿತ್ತೆನ್ನ ಲಾಗಿದೆ. ಇದರಿಂದ ಅದರ ಅಡಿಯಲ್ಲಿ ಪಾರ್ಕ್ ಮಾಡಲಾಗಿದ್ದ ನಾಲ್ಕು ಕಾರು ಗಳು ಜಖಂಗೊಂಡಿವೆ.

ಇದರಲ್ಲಿ ಎರಡು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮತ್ತೆ ಎರಡು ಕಾರುಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಈ ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಎಂಟು ಮಂದಿ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News