ವಿಶ್ವಕಪ್: ಮ್ಯಾಥ್ಯೂಸ್ ಏಕಾಂಗಿ ಹೋರಾಟ, ಶ್ರೀಲಂಕಾ 232/9

Update: 2019-06-21 13:22 GMT

ಲೀಡ್ಸ್, ಜೂ.21: ಆ್ಯಂಜೆಲೊ ಮ್ಯಾಥ್ಯೂಸ್(ಔಟಾಗದೆ 85,115 ಎಸೆತ) ಕೊನೆಗೂ ಮೊದಲಿನ ಲಯಕ್ಕೆ ಮರಳಿದ ಹೊರತಾಗಿಯೂ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ವಿಶ್ವಕಪ್‌ನ 29ನೇ ಪಂದ್ಯದಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 232 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಶುಕ್ರವಾರ ಇಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ನಾಯಕ ಕರುಣರತ್ನೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, 2.2 ಓವರ್‌ಗಳಲ್ಲಿ 3 ರನ್ ಗಳಿಸುವಷ್ಟರಲ್ಲಿ ಶ್ರೀಲಂಕಾ ಆರಂಭಿಕ ದಾಂಡಿಗರಾದ ಕರುಣರತ್ನೆ(1) ಹಾಗೂ ಕುಶಾಲ್ ಪೆರೇರ(2) ಪೆವಿಲಿಯನ್‌ಗೆ ವಾಪಸಾದರು.

3ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದ ಅವಿಷ್ಕಾ ಫೆರ್ನಾಂಡೊ(49) ಹಾಗೂ ಕುಸಾಲ್ ಮೆಂಡಿಸ್(46)ತಂಡವನ್ನು ಆಧರಿಸಿದರು. ಫೆರ್ನಾಂಡೊ ಔಟಾದ ಬಳಿಕ ಮೆಂಡಿಸ್‌ರೊಂದಿಗೆ ಕೈಜೋಡಿಸಿದ ಮಾಜಿ ನಾಯಕ ಮ್ಯಾಥ್ಯೂಸ್ 4ನೇ ವಿಕೆಟ್‌ಗೆ 71 ರನ್ ಜೊತೆಯಾಟದಲ್ಲಿ ಭಾಗಿಯಾದರು.

ಮೆಂಡಿಸ್ 4 ರನ್‌ನಿಂದ ಅರ್ಧಶತಕ ವಂಚಿತರಾಗಿ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಜೀವನ್ ಮೆಂಡಿಸ್(0)ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ವಾಪಸಾದರು. ಆಗ ಧನಂಜಯ ಡಿಲ್ವಾ(29) ಅವರೊಂದಿಗೆ ಇನಿಂಗ್ಸ್ ಬೆಳೆಸಿದ ಮ್ಯಾಥ್ಯೂಸ್ 6ನೇ ವಿಕೆಟ್‌ಗೆ 57 ರನ್ ಸೇರಿಸಿದರು.

ಮ್ಯಾಥ್ಯೂಸ್ 84 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 38ನೇ ಅರ್ಧಶತಕ ಪೂರೈಸಿದರು. ಔಟಾಗದೆ 85 ರನ್ ಗಳಿಸಿದ ಅವರು 115 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ಗಳಿರುವ ತಾಳ್ಮೆಯ ಇನಿಂಗ್ಸ್ ಆಡಿದರು.

ಇಂಗ್ಲೆಂಡ್‌ನ ಪರ ವೇಗದ ಬೌಲರ್‌ಗಳಾದ ಮಾರ್ಕ್ ವುಡ್ (3-40)ಹಾಗೂ ಆರ್ಚರ್(3-52) ತಲಾ ಮೂರು ವಿಕೆಟ್ ಉರುಳಿಸಿದರು. ಸ್ಪಿನ್ನರ್ ಆದಿಲ್ ರಶೀದ್(2-45)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News