ಐಸಿಸ್‌ ಘಟಕದ ಶಂಕಿತ 10 ಮಂದಿ ಬಂಧನ: ಆರೋಪ ಪಟ್ಟಿ ದಾಖಲಿಸಿದ ಎನ್‌ಐಎ

Update: 2019-06-21 18:10 GMT

ಹೊಸದಿಲ್ಲಿ, ಜೂ. 31: ಐಸಿಸ್ ಗುಂಪಿನ ನೂತನ ಘಟಕದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ 10 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಆರೋಪ ಪಟ್ಟಿ ದಾಖಲಿಸಿದೆ. 10 ಮಂದಿಯನ್ನು ಉತ್ತರಪ್ರದೇಶದ ಹಾಗೂ ದಿಲ್ಲಿಯಲ್ಲಿ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು.

 ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯ ವಿವಿಧ ನಿಯಮಗಳ ಅಡಿ ಪಾಟಿಯಾಲ ಹೌಸ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ನ್ಯಾಯಮೂರ್ತಿ ಎಎಸ್‌ಜೆ ಅಜಯ್ ಕುಮಾರ್ ಜೈನ್ ಮುಂದೆ ಆರೋಪ ಪಟ್ಟಿ ಸಲ್ಲಿಸಲಾಯಿತು. ಈ ಪ್ರಕರಣದ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ. ಘಟಕದ ಶಂಕಿತ ನಾಯಕನಾಗಿರುವ ಮುಫ್ತಿ ಮುಹಮ್ಮದ್ ಸುಹೈಲ್ ಹೆಸರನ್ನು ಕೂಡ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

 ಐಸಿಸ್ ಗುಂಪಿನ ನೂತನ ಘಟಕ ಉತ್ತರ ಭಾರತ, ಹೊಸದಿಲ್ಲಿಯಲ್ಲಿರುವ ಸರಕಾರಿ ಕಟ್ಟಡಗಳು ಹಾಗೂ ರಾಜಕಾರಣಿಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲು ಯೋಜಿಸಿತ್ತು ಎಂದು ಎನ್‌ಐಎ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News