ಮಂಗಳೂರು: ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ

Update: 2019-06-22 10:29 GMT

ಮಂಗಳೂರು: 'ಯುನಿವೆಫ್ ಕರ್ನಾಟಕ' ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವು ಜೂ.28ರಂದು ಅಪರಾಹ್ನ 3 ಗಂಟೆಗೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ನಿಮ್ರಾ ಮಸೀದಿಯ ಖತೀಬ್ ಹಾಗೂ 'ಯುನಿವೆಫ್ ಕರ್ನಾಟಕ' ಅಧ್ಯಕ್ಷ ರಫೀಉದ್ದೀನ್‍ ಕುದ್ರೋಳಿ ಅವರು ಹಜ್ ಹಾಗೂ ಉಮ್ರಾದ ವಿಧಿ, ವಿಧಾನಗಳನ್ನು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಯ ಮೂಲಕ ಬ್ಯಾರಿ, ಕನ್ನಡ ಹಾಗೂ ಉರ್ದು ಭಾಷೆಗಳಲ್ಲಿ ವಿವರಿಸಲಿದ್ದಾರೆ. 

ಹಜ್ ಕರ್ಮಗಳ ಛಾಯಾಚಿತ್ರ ಮತ್ತು ವೀಡಿಯೊವನ್ನೂ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಕಾರ್ಯಕ್ರಮದ ಬಳಿಕ ಹಜ್ ಕರ್ಮದಲ್ಲಿ ಪ್ರಸಕ್ತ ಇರುವ ಕೆಲವು ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ನೌಫಲ್ ಹಸನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News