ಉ.ಪ್ರದೇಶ: ಅತ್ಯಾಚಾರ ಆರೋಪಿ ಬಿಎಸ್ಪಿ ಶಾಸಕ ನ್ಯಾಯಾಲಯಕ್ಕೆ ಶರಣು

Update: 2019-06-23 16:47 GMT

 ಲಕ್ನೊ, ಜೂ.23: ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ನೂತನವಾಗಿ ಆಯ್ಕೆಯಾದ ಬಿಎಸ್ಪಿ ಸಂಸದ ಅತುಲ್ ರಾಯ್ ಶನಿವಾರ ವಾರಣಾಸಿಯ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.

ಅತುಲ್ ರಾಯ್‌ಗೆ 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಪತ್ನಿಯನ್ನು ಭೇಟಿ ಮಾಡಿಸುವ ಉದ್ದೇಶದಿಂದ ತನ್ನನ್ನು ಮನೆಗೆ ಕರೆದೊಯ್ದ ಅತುಲ್ ರಾಯ್ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮೇ 1ರಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಆರೋಪ ನಿರಾಕರಿಸಿದ್ದ ರಾಯ್ , ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿರುವಂತೆಯೇ ತಲೆಮರೆಸಿಕೊಂಡಿದ್ದ.

 ಎಪ್ರಿಲ್-ಮೇಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಘೋಸಿ ಸಂಸದೀಯ ಕ್ಷೇತ್ರದಿಂದ ಆಯ್ಕೆಯಾಗಿರುವ ಬಹುಜನ ಸಮಾಜವಾದಿ ಪಕ್ಷದ ಸಂಸದ ರಾಯ್ ವಿರುದ್ಧ 16 ಇತರ ಕ್ರಿಮಿನಲ್ ಆರೋಪಗಳಿರುವುದರಿಂದ ಬಂಧನದಿಂದ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದುಯ ಸುಪ್ರೀಂಕೋರ್ಟ್ ಮೇ 23ರಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News