ಬಿನೋಯ್ ಕೊಡಿಯೇರಿ ಬಂಧನಕ್ಕಾಗಿ ಕೇರಳಕ್ಕೆ ಆಗಮಿಸಿದ ಮುಂಬೈ ಪೊಲೀಸರು

Update: 2019-06-23 17:13 GMT

ತಿರುವನಂತಪುರ, ಜೂ. 23: ಕಳೆದ ವಾರ ಮುಂಬೈಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ನಾಪಪತ್ತೆಯಾಗಿರುವ ಬಿನೋಯ್ ಕೋಡಿಯೇರಿಯನ್ನು ಬಂಧಿಸಲು ಮುಂಬೈ ಪೊಲೀಸರ ತಂಡ ಶನಿವಾರ ಕೇರಳಕ್ಕೆ ತಲುಪಿದೆ.

ಮುಂಬೈಯ ಅಂಧೇರಿ ಪ್ರದೇಶದಲ್ಲಿರುವ ಒಸಿವಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಬಿಹಾರ ಮೂಲದ 33 ವರ್ಷದ ಮಹಿಳೆ, ಬಿನೋಯ್ ವಿವಾಹವಾಗುವ ಭರವಸೆ ನೀಡಿ ತನ್ನ ಮೇಲೆ ಹಲವು ವರ್ಷಗಳಿಂದ ಅತ್ಯಾಚಾರ ಎಸಗುತ್ತಾ ಬಂದಿದ್ದಾರೆ. ನಮಗೆ ಒಬ್ಬ ಪುತ್ರ ಕೂಡ ಇದ್ದಾನೆ ಎಂದು ಹೇಳಿದ್ದಾರೆ.

 2008ರಲ್ಲಿ ದುಬೈಯಲ್ಲಿ ಡ್ಯಾನ್ಸ್ ಬಾರ್‌ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾಗ ನಮ್ಮ ನಡುವೆ ಸಂಬಂಧ ಆರಂಭವಾಗಿತ್ತು. ಈಗ ನಮಗೆ 8 ವರ್ಷದ ಪುತ್ರ ಇದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ತನ್ನ ಆರೋಪ ಸಾಬೀತುಪಡಿಸಲು ಹಾಗೂ ಮಗು ಆತನದ್ದೇ ಎಂದು ಸಾಬೀತುಪಡಿಸಲು ಯಾವುದೇ ಪರೀಕ್ಷೆಗೆ ಒಳಗಾಗಲು ತಾನು ಸಿದ್ಧ ಎಂದು ಮಹಿಳೆ ಹೇಳಿದ್ದಾರೆ. ಬಿನೋಯ್ ಮುಂಬೈ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದು, ಸೋಮವಾರ ಇದರ ವಿಚಾರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News