ವಿದ್ಯಾರ್ಥಿಗಳಿಗೆ ಡಾ. ಅಂಬೇಡ್ಕರ್ ಮಾದರಿಯಾಗಲಿ : ಅಬ್ದುಲ್ ಅಹದ್

Update: 2019-06-24 07:22 GMT

ಮೂಡುಬಿದಿರೆ, ಜೂ. 24: ಶಿಕ್ಷಣದ ಮೂಲಕ ಜೀವನದಲ್ಲಿ ಯಾವುದೇ ಎತ್ತರಕ್ಕೆ ಏರಲು ಸಾಧ್ಯ. ನಮ್ಮ ದೇಶದ ಸಂವಿಧಾನ ಶಿಲ್ಪಿ, ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಈ ದೇಶಕ್ಕೆ ನೀಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಇದಕ್ಕೆ ಅತ್ಯುತ್ತಮ ನಿದರ್ಶನ. ಇದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಅವರು ಹೇಳಿದರು.

ಅವರು ಇಲ್ಲಿನ ಗೌತಮ ನಗರ ಕಾನದಲ್ಲಿರುವ ಮೌಲಾನಾ ಇ.ಎಂ. ಶಾಫಿ ಅಧ್ಯಯನ ಕೇಂದ್ರದಲ್ಲಿ ಸ್ಥಳೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ರವಿವಾರ ಆಯೋಜಿಸಲಾಗಿದ್ದ ವಾರ್ಷಿಕ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತಾಡುತ್ತಿದ್ದರು.

ಅಂಬೇಡ್ಕರ್ ಅವರಂತೆ ಶಿಕ್ಷಣದ ಮೂಲಕ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡುವ ಪ್ರೇರಣೆ ನಮ್ಮ ಊರಿನ ಎಲ್ಲ ಮಕ್ಕಳಿಗೆ ಸಿಗಬೇಕು ಎಂಬ ಉದ್ದೇಶದಿಂದಲೇ ಇಲ್ಲಿ ನಮ್ಮ ತಂದೆಯ ಹೆಸರಿನಲ್ಲಿ ಈ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಅಧ್ಯಯನ ಕೇಂದ್ರದ ಪ್ರಯೋಜನವನ್ನು ಎಲ್ಲ ಮಕ್ಕಳು ಪಡೆದುಕೊಂಡು ಭವಿಷ್ಯದ ನಾಯಕರಾಗಿ ಬೆಳೆಯುವಂತಾಗಲಿ ಎಂದು ಅಬ್ದುಲ್ ಅಹದ್ ಅವರು ಹಾರೈಸಿದರು. 

ವಿಶ್ವಾಸ್ ಬಾವಾ ಬಿಲ್ಡರ್ಸ್ ನ ಅಬುಲಾಲ್ ಪುತ್ತಿಗೆ ಅವರು ಮಾತನಾಡಿದರು. ಪುತ್ತಿಗೆ ಬಿಲ್ಡರ್ಸ್ ನ ಫತೇ ಮುಹಮ್ಮದ್ ಪುತ್ತಿಗೆ, ಪಂಚಾಯತ್ ಸದಸ್ಯರಾದ ಬಾಬಣ್ಣ, ಸುರೇಶ್ ಕಾನ ಮತ್ತಿತರರು ಉಪಸ್ಥಿತರಿದ್ದರು.

ಒಂದರಿಂದ ನಾಲ್ಕು ತರಗತಿಯ ಮಕ್ಕಳು, ನಾಲ್ಕರಿಂದ 7ನೆ ತರಗತಿಯ ಮಕ್ಕಳಿಗೆ ಚಿತ್ರಕಲೆ ಹಾಗು ಇತರರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News