Breaking News: ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಮುರಿದ ಮಾಯಾವತಿ

Update: 2019-06-24 07:19 GMT

ಹೊಸದಿಲ್ಲಿ, ಜೂ.24: ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಕೊನೆಗೊಳಿಸಿರುವುದಾಗಿ ಬಿಎಸ್ಪಿ ನಾಯಕಿ ಮಾಯಾವತಿ ಸೋಮವಾರ ಘೋಷಿಸಿದ್ದಾರೆ.

“ಸಮಾಜವಾದಿ ಪಕ್ಷದ ದಲಿತ ವಿರೋಧಿ ಸರಕಾರ ಮತ್ತು 2012-17ರಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಹೊರತಾಗಿಯೂ ಹಳೆಯದನ್ನು ಮರೆತು ಘಟಬಂಧನದಲ್ಲಿ ಮುಂದುವರಿಯಲು ನಾವು ನಿರ್ಧರಿಸಿದೆವು. ಆದರೆ ಲೋಕಸಭೆ ಚುನಾವಣೆಯ ನಂತರ ಎಸ್ಪಿಯ ನಡವಳಿಕೆಯು ಹೀಗೆ ಮುಂದುವರಿದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಸೋಲಿಸಲು ಸಾಧ್ಯವೇ ಎನ್ನುವ ಬಗ್ಗೆ ಆಲೋಚಿಸುವಂತೆ ಮಾಡಿದೆ. ಹಾಗಾಗಿ ಪಕ್ಷದ ಹಿತದೃಷ್ಟಿಯಿಂದ, ಬಿಎಸ್ಪಿಯು ಮುಂದಿನ ಚುನಾವಣೆಗಳನ್ನು ಏಕಾಂಗಿಯಾಗಿ ಎದುರಿಸಲಿದೆ” ಎಂದವರು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ್ದ ಅವರು, ಅಖಿಲೇಶ್ ಯಾದವ್ ಮುಸ್ಲಿಮ್ ವಿರೋಧಿ. ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡದಂತೆ ತನಗೆ ಹೇಳಿದ್ದರು. “ಆದರೆ ನಾನು ಅವರ ಮಾತುಗಳನ್ನು ಕೇಳಿಲ್ಲ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಯಾದವರಲ್ಲದವರಿಗೆ ಹಾಗು ದಲಿತರಿಗೆ ಅನ್ಯಾಯವಾಗಿತ್ತು”  ಎಂದರು.

READ THIS STORY IN ENGLISH

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News