ಆಳ್ವಾಸ್‌ನ 33 ವಿದ್ಯಾರ್ಥಿಗಳು ಎನ್.ಡಿ.ಎಗೆ ಆಯ್ಕೆ

Update: 2019-06-24 07:48 GMT

ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ ನಡೆಸುವ  ಎನ್.ಡಿ.ಎ ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‌ನ 33 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪುಣೆಯ ಕಡಕ್‌ವಾಸ್ಲದಲ್ಲಿರುವ  ಎನ್.ಡಿ.ಎ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆಗೆ ದೇಶಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 7,904 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಶ್ರೀನಿವಾಸ್ ಎನ್., ನಿರಂಜನ್ ಎಸ್. ಪಟ್ಟನ್‌ಶೆಟ್ಟಿ, ಲೋಹಿತ್ ಎಂ.ಎಸ್., ಮೊಹಮ್ಮದ್ ಅರ್ಶ್, ನಂದೀಶ ಕೆ., ಪಿ. ಎಸ್. ರವೀಂದ್ರ, ವರುಣ್ ತೇಜ್ ವೈ.ಡಿ., ಹರ್ಷ ವಿ, ಅಮೋಘ ಪ್ರಭು, ಸುಜಿತ್ ಡಿ, ಗಗನ್ ಕೆ., ಶ್ರೀವಾಸ್ತ ಎನ್.ಎಸ್., ಶ್ರೇಯಾಂಕ್ ಶ್ರೀಧರ್ ಶೆಟ್, ಹರೀಶ್ ಆರ್. ನಂದನಿ, ಬಾಲಾಜಿ ನಾಯ್ಡು ವಿ., ಪ್ರಜ್ವಲ್ ಎಂ., ಗುರುಪ್ರಸಾದ್ ನಿರ್ವಾನಿ ಕಬಡಗಿ, ಶ್ಯಾಮ್ ವಿಠಲ್ ಅಮಾಠೆ, ನಿತಿನ್ ಎಸ್, ಮನೋಜ್ ಪಿ. ಎಂ., ಅರುಣ್ ಕೆ.ಎಂ, ಶರಣ್ ಎ. ಪಟೀಲ್, ರವಿಕಿರಣ್ ಬರಾಗಿ, ಅಕ್ಷಯ್ ಕುಮಾರ್ ನಲಟವಾಡ್, ಹರ್ಷ ವೈ . ಶಿಹೋರ, ಮಹೇಶ್ ಎಂ. ಕಂಪಲಿ, ಪ್ರಶಾಂತ್ ಎಸ್. ಶಟ್ಟರಗಿ, ಸಂತೋಷ್ ಎಸ್. ಮುಡೆನೂರ್, ಶಶಿಧರ್ ಗೌಡಕೆ. ಎಂ, ಶಿವಕುಮಾರ್ ಹಾಲನಗಲಿ, ಚಿನ್ಮಯ್ ಎಸ್. ನಡಿಗಿರ್,  ಪ್ರಮತ್ ಪಿ. ಮೂಗಿ, ಸುಹಾನ್ ಜೆ. ಬಂಗೇರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ನಡೆಯುವ ಎಸ್ ಎಸ್ ಬಿ ಸುತ್ತಿಗೆ ಭಾಗವಹಿಸುವ ಅರ್ಹತೆ ಪಡೆದಿರುತ್ತಾರೆ.  ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲರಾದ ರಮೇಶ್ ಶೆಟ್ಟಿ ಹಾಗೂ ಸಂಯೋಜಕರುಗಳಾದ ಅಶ್ವಥ್ ಎಸ್.ಎಲ್ ಮತ್ತು ಗಣನಾಥ ಶೆಟ್ಟಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News