Breaking News- ಮುಝಫರ್ ಪುರ ಮಕ್ಕಳ ಸಾವು: ಕೇಂದ್ರ, ರಾಜ್ಯ ಆರೋಗ್ಯ ಸಚಿವರ ವಿರುದ್ಧ ತನಿಖೆಗೆ ಆದೇಶಿಸಿದ ಕೋರ್ಟ್

Update: 2019-06-24 13:10 GMT
ಕೇಂದ್ರ ಅರೋಗ್ಯ ಸಚಿವ ಡಾ. ಹರ್ಷವರ್ಧನ

ಮುಝಫರ್ ಪುರ: ಮೆದುಳು ಉರಿಯೂತದಿಂದ ನೂರಾರು ಮಕ್ಕಳು ಸಾವಿಗೀಡಾಗಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಹಾಗು ಹಾಗು ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ವಿರುದ್ಧ ತನಿಖೆ ನಡೆಸುವಂತೆ ಮುಝಫರ್ ಪುರ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯಕಾಂತ್ ತಿವಾರಿ ಆದೇಶಿಸಿದ್ದಾರೆ. 

ಬಿಹಾರದ ಮುಝಫರ್ ಪುರದಲ್ಲಿ ಮೆದುಳು ಉರಿಯೂತದಿಂದ ನೂರಾ ಮೂವತ್ತಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದು ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಈ ವಿಷಯದಲ್ಲಿ ರಾಜ್ಯ ಹಾಗು ಕೇಂದ್ರ ಸರಕಾರಗಳು ತೀವ್ರ ನಿರ್ಲಕ್ಷ್ಯ ತಾಳಿದ್ದು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. 

ಬಿಹಾರ ಅರೋಗ್ಯ ಸಚಿವ ಮಂಗಲ್ ಪಾಂಡೆ ಕೂಡ ಈ ಗಂಭೀರ ಘಟನೆಯ ಕುರಿತು ಸರಿಯಾಗಿ ಕ್ರಮ ಕೈಗೊಳ್ಳಲಿಲ್ಲ ಎಂದು ದೂರು ಕೇಳಿ ಬಂದಿತ್ತು. ವಿಷಯದ ಕುರಿತು ಸಭೆಯಲ್ಲಿ ಕ್ರಿಕೆಟ್ ಸ್ಕೋರ್ ಕೇಳಿ ಕೂಡ ಪಾಂಡೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News